ಬೆಂಗಳೂರು: ಚೆನ್ನೈನ ಮ್ಯೂಸಿಕ್ ಅಕಾಡೆಮಿ ವತಿಯಿಂದ ಕರ್ನಾಟಕ ಸಂಗೀತ (ಗಾಯನ)ದಲ್ಲಿ ನಡೆಸುವ ಒಂದು ವರ್ಷದ ಡಿಪ್ಲೊಮಾ ಕೋರ್ಸ್ ಪ್ರವೇಶಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ.
ಆಯ್ಕೆಯಾದ ಅಭ್ಯರ್ಥಿಗಳಿಗೆ ಕರ್ನಾಟಕ ಸಂಗೀತದ ತಜ್ಞರಾದ ಆರ್.ವೇದವಲ್ಲಿ, ಪ್ರೊ. ರಿತಾ ರಾಜನ್, ಡಾ. ಆರ್.ಎಸ್. ಜಯಲಕ್ಷ್ಮಿ, ಪಿ.ಎಸ್. ನಾರಾಯಣಸ್ವಾಮಿ, ಎಸ್. ಸೌಮ್ಯ, ಸುಗುಣಾ ವರದಾಚಾರಿ, ಎನ್. ಸಂತಾನಗೋಪಾಲನ್, ಶ್ಯಾಮಲ್ ವೆಂಕಟೇಶ್ವರನ್, ಶ್ರೀರಾಮ್ ಪರಶುರಾಮ್ ತರಬೇತಿ ನೀಡಲಿದ್ದಾರೆ.
ಎರಡು ಸೆಮಿಸ್ಟರ್‌ಗಳಲ್ಲಿ ತರಬೇತಿ ನಡೆಯಲಿದೆ. ಜುಲೈ 23ರಿಂದ ತರಗತಿಗಳು ಆರಂಭವಾಗಲಿದ್ದು, ನವೆಂಬರ್‌ವರೆಗೆ ನಡೆಯಲಿವೆ. ಬಳಿಕ ಜನವರಿಯಿಂದ ಜುಲೈವರೆಗೆ ತರಗತಿಗಳು ಮುಂದುವರಿಯಲಿವೆ.
ಅಭ್ಯರ್ಥಿಗಳು 18 ವರ್ಷದಿಂದ 35 ವರ್ಷದೊಳಗಿನ ವಯೋಮಾನದವರು ಆಗಿರಬೇಕು. ಪಿಯುಸಿಯಲ್ಲಿ ತೇರ್ಗಡೆ ಹೊಂದಿರಬೇಕು. ಸಂಗೀತದ ಮನೋಧರ್ಮ ಬಲ್ಲವರಾಗಿರಬೇಕು. ವರ್ಣ ಮತ್ತು ಕೃತಿಗಳನ್ನು ಹಾಡುವ ಸಾಮರ್ಥ್ಯ ಪಡೆದಿರಬೇಕು.
ಆಸಕ್ತರು ತಾವು ಇದುವರೆಗೆ ಪಡೆದ ತರಬೇತಿ ವಿವರಗಳೊಂದಿಗೆ ಅರ್ಜಿ ಸಲ್ಲಿಸಬೇಕು.
ಗರಿಷ್ಠ 10 ಜನರಿಗೆ ತರಬೇತಿ ನೀಡಲು ಅವಕಾಶ ಇದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಜುಲೈ 4.
ವಿಳಾಸ: ದಿ ಮ್ಯೂಸಿಕ್ ಅಕಾಡೆಮಿ (ಮದ್ರಾಸ್), ನಂ. 168, ಟಿಟಿಕೆ ರಸ್ತೆ, ರಾಯ್‌ಪೇಟ್, ಚೆನ್ನೈ– 600 014.
ದೂರವಾಣಿ ಸಂಖ್ಯೆ: 044 – 2811 2231, 2811 5162
ಇಮೇಲ್:
music@musicacademymadras.com / pappuvenu@gmail.com
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.