ADVERTISEMENT

ಸಂಗೀತ ನೃತ್ಯ ಅಕಾಡೆಮಿ ಪ್ರಶಸ್ತಿ ಪ್ರಕಟ

​ಪ್ರಜಾವಾಣಿ ವಾರ್ತೆ
Published 11 ಅಕ್ಟೋಬರ್ 2012, 19:30 IST
Last Updated 11 ಅಕ್ಟೋಬರ್ 2012, 19:30 IST
ಸಂಗೀತ ನೃತ್ಯ ಅಕಾಡೆಮಿ ಪ್ರಶಸ್ತಿ ಪ್ರಕಟ
ಸಂಗೀತ ನೃತ್ಯ ಅಕಾಡೆಮಿ ಪ್ರಶಸ್ತಿ ಪ್ರಕಟ   

ಬೆಂಗಳೂರು: ಕರ್ನಾಟಕ ಸಂಗೀತ ಮತ್ತು ನೃತ್ಯ ಅಕಾಡೆಮಿಯ ಪ್ರಶಸ್ತಿಗಳನ್ನು ಪ್ರಕಟಿಸಲಾಗಿದೆ.
2011-12ನೇ ಸಾಲಿನ ಗೌರವ ಪ್ರಶಸ್ತಿಗೆ ಬೆಂಗಳೂರಿನ ಲಲಿತಾ ಜೆ.ರಾವ್ (ಹಿಂದುಸ್ತಾನಿ), ಶಿವ ಮೊಗ್ಗದ ಎಂ.ಎಲ್.ಚನ್ನಕೇಶವಶಾಸ್ತ್ರಿ (ಗಮಕ) ಹಾಗೂ 2012-13ನೇ ಸಾಲಿಗೆ ಉಡುಪಿಯ ಬಿ.ವಿ.ನಾರಾಯಣ ಐತಾಳ್ (ಕರ್ನಾಟಕ ಸಂಗೀತ), ಕಮಲ ರಾಜೀವ ಪುರಂದರೆ (ಸುಗಮ ಸಂಗೀತ) ಆಯ್ಕೆಯಾಗಿದ್ದಾರೆ.

ಡಾ.ಸುಮಾ ಸುಧೀಂದ್ರ, ಸಿ.ಚೆಲುವರಾಜ್ ಸೇರಿದಂತೆ 31 ಕಲಾವಿದರಿಗೆ `ಕರ್ನಾಟಕ ಕಲಾಶ್ರೀ ವಾರ್ಷಿಕ ಪ್ರಶಸ್ತಿ~ ನೀಡಲಾಗುವುದು. ಅಲ್ಲದೆ  ಸಂಗೀತ ಮತ್ತು ನೃತ್ಯ ಕಲೆಯನ್ನು ಉಳಿಸಿ ಬೆಳೆಸುತ್ತಿರುವ ಬೆಂಗಳೂರಿನ ಕಿಂಕಿಣಿ ಸಂಸ್ಥೆ ಮತ್ತು ಮುಂಬೈನ ಉಮಾ ನಾಗಭೂಷಣ (ಹೊರನಾಡು ಕನ್ನಡ ಕಲಾವಿದ ಪ್ರಶಸ್ತಿ) ಅವರನ್ನೂ ಪ್ರಶಸ್ತಿಗೆ ಹೆಸರಿಸಲಾಗಿದೆ ಎಂದು ಅಕಾಡೆಮಿಯ ಅಧ್ಯಕ್ಷೆ ವೈಜಯಂತಿ ಕಾಶಿ ಗುರುವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

`ರಾಜ್ಯದ ಎಲ್ಲ ಜಿಲ್ಲೆಯ ಕಲಾವಿದರಿಗೂ ಆದ್ಯತೆ ನೀಡಲಾಗಿದೆ. ಸದಸ್ಯರ ಸಭೆಯಲ್ಲಿ ಕಲಾವಿದರ ವಯೋಮಿತಿ, ಸಾಧನೆಯನ್ನು ಕೂಲಂಕಷವಾಗಿ ಚರ್ಚೆ ನಡೆಸಿ ಅರ್ಹರ ಆಯ್ಕೆ ಮಾಡಲಾಗಿದೆ. ಪುರಸ್ಕೃತರಲ್ಲಿ 17 ಮಹಿಳೆಯರು~ ಎಂದು ತಿಳಿಸಿದರು. `ಸಂಗೀತ ಮತ್ತು ನೃತ್ಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿರುವ 45 ವರ್ಷಕ್ಕೂ ಮೇಲ್ಪಟ್ಟ ಕಲಾವಿದರನ್ನು ಪ್ರಶಸ್ತಿಗೆ ಪರಿಗಣಿಸಲಾಗಿದೆ.

ಗೌರವ ಪ್ರಶಸ್ತಿ ಪುರಸ್ಕೃತರಿಗೆ 10 ಸಾವಿರ ರೂ ನಗದು, ಪ್ರಮಾಣ ಪತ್ರ ಹಾಗೂ ವಾರ್ಷಿಕ ಪ್ರಶಸ್ತಿ ಪುರಸ್ಕೃತರಿಗೆ ತಲಾ ಐದು ಸಾವಿರ ರೂಪಾಯಿ ನೀಡಲಾಗುವುದು. ನವೆಂಬರ್ 24 ರಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯಲಿರುವ ಸಮಾರಂಭದಲ್ಲಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ~ ಎಂದರು.

ವಾರ್ಷಿಕ ಪ್ರಶಸ್ತಿ (2011-12): ಮೈಸೂರಿನ ಜಿ.ಎಸ್.ಕಮಲಾ, ಜಿ.ಎಸ್.ರಾಜಲಕ್ಷ್ಮಿ , ಹಾಸನದ ಎಸ್. ಶಾಂತ ಲಕ್ಷ್ಮಿ ನಾಗೇಂದ್ರನಾಥ, ಬಾಗಲ ಕೋಟೆಯ ಎಚ್.ಆರ್.ಬಡಿಗೇರ, ಬೆಳಗಾವಿಯ ಜಯಶ್ರೀ ರಮೇಶ್ ಪಾಟ್ನೇಕರ್(ಹಾಡುಗಾರಿಕೆ), ಮಂಡ್ಯದ ಸಿ. ಚೆಲುವರಾಜ್ (ಮೃದಂಗ), ಬೆಳಗಾವಿಯ ಕಾಶೀಂಸಾಬ್ ಎಲ್. ಜಮಾದಾರ (ತಬಲಾ), ಉಡುಪಿಯ ಮೀನಲ್ ಪ್ರಭು, ಹುಬ್ಬಳ್ಳಿಯ ಸುಜಾತಾ ರಾಜಗೋಪಾಲ (ಭರತ ನಾಟ್ಯ), ಧಾರವಾಡದ ನಯನಾ ಎಸ್. ಮೋರೆ (ಕಥಕ್), ಬೆಂಗಳೂರಿನ ಕನಕರಾಜ್ (ನೃತ್ಯ ಮತ್ತು ಪ್ರಸಾದನ), ಧಾರವಾಡದ ಡಾ. ಸುಲಭಾದತ್ತ ನೀರಲಗಿ, ಶಿವಮೊಗ್ಗದ ಎಸ್.ಎಲ್.ವೇಣುಗೋಪಾಲ್ (ಸುಗಮ ಸಂಗೀತ), ಚಿಕ್ಕಮಗಳೂರಿನ ಜಿ.ಆರ್. ಕೇಶವಮೂರ್ತಿ (ಕಥಾಕೀರ್ತನ), ತುಮಕೂರಿನ ಕೆ.ಬಿ. ಹೈಮವತಮ್ಮ (ಗಮಕ), ಬೆಂಗಳೂರಿನ ಡಾ.ಸುಮಾ ಸುಧೀಂದ್ರ (ವೀಣೆ). 

(2012-13ನೇ ಸಾಲಿಗೆ)
ಬೆಂಗಳೂರಿನ ಟಿ.ಎಸ್.ಸತ್ಯವತಿ, ವಿಜಾಪುರದ ಶಾಮ ಆಲೂರು, ಬೀದರ್‌ನ ವಿರೂಪಾಕ್ಷ ಸ್ವಾಮಿ ಗೋರಟ (ಗಾಯನ), ದಕ್ಷಿಣ ಕನ್ನಡದ  ಕೆ.ಯು.ರಾಘವೇಂದ್ರರಾವ್ (ಕೊಳಲು), ಬೆಂಗಳೂರಿನ ಎಚ್.ಕೆ.ನರಸಿಂಹಮೂರ್ತಿ (ಪಿಟೀಲು), ಗುಲ್ಬರ್ಗದ  ಶಿವಣ್ಣ ದೇಸಾಯಿಕಲ್ಲೂರ, ಧಾರವಾಡದ ಡಾ.ರಾಚಯ್ಯ ಹಿರೇಮಠ (ತಬಲಾ), ಸುರತ್ಕಲ್‌ನ ಕೆ.ಚಂದ್ರಶೇಖರ ನಾವಡ, ದಾವಣಗೆರೆಯ ರಾಮಕೃಷ್ಣ ಭಟ್ (ಭರತನಾಟ್ಯ), ಬೆಂಗಳೂರಿನ ರಶ್ಮಿ ಹೆಗ್ಡೆ ಗೋಪಿ (ಕೂಚಿಪುಡಿ, ಮೋಹಿನಿಯಾಟ್ಟಂ), ಬೆಂಗಳೂರಿನ ಡಾ.ಎಸ್.ನಟರಾಜ ಮೂರ್ತಿ (ನೃತ್ಯ- ಪಿಟೀಲು), ಮಂಡ್ಯದ ಕಿಕ್ಕೇರಿ ಕೃಷ್ಣಮೂರ್ತಿ, ಚಿತ್ರದುರ್ಗದ ಎಂ.ತೋಟಪ್ಪ ಉತ್ತಂಗಿ (ಸುಗಮ ಸಂಗೀತ), ಗದಗದ ಸಿದ್ದೇಶ್ವರ ಶಾಸ್ತ್ರಿ ತೆಲ್ಲೂರು (ಕಥಾಕೀರ್ತನ), ತುಮಕೂರಿನ ತುಂಕೂರು ಸುನಂದಾ (ಗಮಕ).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.