ADVERTISEMENT

‘ಸಂವಿಧಾನಕ್ಕೆ ಕೈ ಹಾಕಿದರೆ ಕೈ ಕತ್ತರಿಸಲಾಗುವುದು’

​ಪ್ರಜಾವಾಣಿ ವಾರ್ತೆ
Published 11 ಮಾರ್ಚ್ 2018, 20:20 IST
Last Updated 11 ಮಾರ್ಚ್ 2018, 20:20 IST
ಕೂಡ್ಲಿಗಿ ಪಟ್ಟಣದ ಚಂದ್ರಶೇಖರ್ ಆಜಾದ್ ರಂಗ ಮಂದಿರದಲ್ಲಿ ಭಾನುವಾರ ಛಲವಾದಿ ಮಹಾಸಭಾದ ತಾಲ್ಲೂಕು ಘಟಕ ಏರ್ಪಡಿಸಿದ್ದ ತಾಲ್ಲೂಕು ಮಟ್ಟದ ಛಲವಾದಿ ಜನಾಂಗದ ಜಾಗೃತಿ ಸಮಾವೇಶ ಹಾಗೂ ಛಲವಾದಿ ಪತ್ತಿನ ಸಹಕಾರ ಸಂಘದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮೈಸೂರು ಉರಿಲಿಂಗಪೆದ್ದಿ ಮಠದ ಜ್ಞಾನ ಪ್ರಕಾಶ ಮಹಾಸ್ವಾಮಿ ಮಾತನಾಡಿದರು.

ಕೂಡ್ಲಿಗಿ (ಬಳ್ಳಾರಿ ಜಿಲ್ಲೆ): ‘ಸಂವಿಧಾನಕ್ಕೆ ಕೈ ಹಾಕಿದರೆ, ಅವರ ಕೈ ಕತ್ತರಿಸಲಾಗುವುದು; ತಲೆ ಹಾಕಿದರೆ ತಲೆ ಕತ್ತರಿಸಲಾಗುವುದು’ ಎಂದು ಮೈಸೂರಿನ ಉರಿಲಿಂಗಪೆದ್ದಿ ಮಠದ ಜ್ಞಾನಪ್ರಕಾಶ ಸ್ವಾಮೀಜಿ ಎಚ್ಚರಿಕೆ ನೀಡಿದರು.

ಪಟ್ಟಣದಲ್ಲಿ ಭಾನುವಾರ ಆಯೋಜಿಸಿದ್ದ, ತಾಲ್ಲೂಕು ಮಟ್ಟದ ಛಲವಾದಿ ಜನಾಂಗದ ಜಾಗೃತಿ ಸಮಾವೇಶ ಹಾಗೂ ಛಲವಾದಿ ಪತ್ತಿನ ಸಹಕಾರ ಸಂಘದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

‘2019ಕ್ಕೆ ಈ ದೇಶದ ಸಂವಿಧಾನ ಬದಲಾಯಿಸುವ ನಿರ್ಣಯವನ್ನು ಸಂಘ ಪರಿವಾರದವರು ಮಾಡಿದ್ದು, ಮೀಸಲಾತಿಯನ್ನು ಕೈಬಿಡಲಿದ್ದಾರೆ. ಅಂಬೇಡ್ಕರ್ ರಚಿಸಿದ ಸಂವಿಧಾನವನ್ನು ಬಲಾಯಿಸುತ್ತೇವೆ ಎಂದು ಹೇಳುವವರನ್ನೇ ಬದಲಾಯಿಸುವ ಛಲವನ್ನು ನೀವು ಹೊಂದಬೇಕು. ಅಂಬೇಡ್ಕರ್ ನೀಡಿರುವ ಸಂವಿಧಾನದಿಂದಾಗಿ ಮೋದಿ ಪ್ರಧಾನಿಯಾಗಿದ್ದಾರೆ, ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದಾರೆ. ಈ ದೇಶದ ಜನರನ್ನು ಯಾವ ದೇವರೂ ರಕ್ಷಣೆ ಮಾಡಲಿಲ್ಲ. ಆದರೆ, ರಕ್ಷಣೆ ಮಾಡಿದ್ದು ಅಂಬೇಡ್ಕರ್ ಮಾತ್ರ’ ಎಂದು ಹೇಳಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.