ADVERTISEMENT

‘ಸರ್ವ ಜನಾಂಗದ ಶಾಂತಿಯ ತೋಟ’ದ ಮುಂದಿನ ಸಾಲುಗಳನ್ನು ಅಮಿತ್ ಶಾ ಓದಿಲ್ಲ ಅನಿಸುತ್ತೆ : ಸಿದ್ದರಾಮಯ್ಯ

​ಪ್ರಜಾವಾಣಿ ವಾರ್ತೆ
Published 27 ಮಾರ್ಚ್ 2018, 10:05 IST
Last Updated 27 ಮಾರ್ಚ್ 2018, 10:05 IST
ಸಿದ್ದರಾಮಯ್ಯ
ಸಿದ್ದರಾಮಯ್ಯ   

ಬೆಂಗಳೂರು: ಶಿವಮೊಗ್ಗದಲ್ಲಿರುವ ಕುವೆಂಪು ಅವರ ಸಮಾಧಿ ಸ್ಥಳ ಕವಿಶೈಲಕ್ಕೆ ಭೇಟಿ ನೀಡಿದ ಬಳಿಕ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಮಾಡಿರುವ ಟ್ವೀಟ್‌ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.

ಅಮೀತ್‌ ಶಾ ಅಂತವರು ಸಹ ಕುವೆಂಪು ನುಡಿಗಳನ್ನು ಬಳಸುವಂತೆ ಮಾಡಿದ ಕರ್ನಾಟಕದ ಚುನಾವಣೆಗೆ ಧನ್ಯವಾದ ಹೇಳುತ್ತೇನೆ. ರಾಷ್ಟ್ರಕವಿಯ ‘ಎಲ್ಲರನ್ನು ಒಳಗೊಳ್ಳುವ ದೃಷ್ಟಿಕೋನ’ದಿಂದ ಹೊರತಾದ ಪಕ್ಷವನ್ನು ಪ್ರತಿನಿಧಿಸುವ ಅಮಿತ್‌ ಶಾ ತಾವು ಉಲ್ಲೇಖಿಸಿರುವ ‘ಸರ್ವ ಜನಾಂಗದ ಶಾಂತಿಯ ತೋಟ’ ಪ್ಯಾರಾದ ಮುಂದಿನ ಸಾಲುಗಳನ್ನು ಬಹುಶ: ಓದಿರಲಿಕ್ಕಿಲ್ಲ ಎಂದು ಟ್ವೀಟ್‌ ಮಾಡಿದ್ದಾರೆ.

ಈ ಪ್ಯಾರಾದ
‘ಹಿಂದೂ ಕ್ರೈಸ್ತ ಮುಸಲ್ಮಾನ,
ಪಾರಸಿಕ ಜೈನರುದ್ಯಾನ
ಜನಕನ ಹೋಲುವ ದೊರೆಗಳ ಧಾಮ’ ಸಾಲುಗಳನ್ನು ಉಲ್ಲೇಖಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.