ADVERTISEMENT

ಸಾಕ್ಷ್ಯ ಇಂಗ್ಲಿಷ್‌ನಲ್ಲೇ ದಾಖಲಿಸಲು ‌ಆದೇಶ

​ಪ್ರಜಾವಾಣಿ ವಾರ್ತೆ
Published 21 ಏಪ್ರಿಲ್ 2018, 20:06 IST
Last Updated 21 ಏಪ್ರಿಲ್ 2018, 20:06 IST
ಸಂಗ್ರಹ ಚಿತ್ರ.
ಸಂಗ್ರಹ ಚಿತ್ರ.   

ಬೆಂಗಳೂರು: ‘ವಿಚಾರಣೆ ವೇಳೆ ತಜ್ಞರ ಸಾಕ್ಷ್ಯಗಳನ್ನು ಇಂಗ್ಲಿಷ್‌ನಲ್ಲೇ ದಾಖಲಿಸಿಕೊಳ್ಳಬೇಕು' ಎಂದು ರಾಜ್ಯದ ಎಲ್ಲ ಅಧೀನ ನ್ಯಾಯಾಲಯಗಳಿಗೆ ಹೈಕೋರ್ಟ್ ಆದೇಶಿಸಿದೆ.

ಈ ಕುರಿತಂತೆ ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್‌ ಅಶೋಕ ಜಿ. ನಿಜಗಣ್ಣವರ ಎಲ್ಲ ಅಧೀನ ನ್ಯಾಯಾಲಯಗಳಿಗೆ ಸುತ್ತೋಲೆ ಹೊರಡಿಸಿದ್ದಾರೆ.

‘ಹೈಕೋರ್ಟ್‌ ಮೆಟ್ಟಿಲೇರುವ ಕ್ರಿಮಿನಲ್‌ ಮೇಲ್ಮನವಿಗಳಲ್ಲಿ, ಕನ್ನಡದಲ್ಲಿ ದಾಖಲಿಸಿಕೊಂಡ ತಜ್ಞರ ಸಾಕ್ಷ್ಯಗಳನ್ನು ಇಂಗ್ಲಿಷ್‌ಗೆ ಭಾಷಾಂತರ ಮಾಡಬೇಕಾಗುತ್ತದೆ. ಈ ಭಾಷಾಂತರದಲ್ಲಿ ಏನಾದರೂ ವ್ಯತ್ಯಾಸವಾದರೆ ಅದು ಪ್ರಕರಣದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ’ ಎಂದು ಸುತ್ತೋಲೆಯಲ್ಲಿ ವಿವರಿಸಲಾಗಿದೆ.

ADVERTISEMENT

‘ಕೆಲವು ಪ್ರಕರಣಗಳಲ್ಲಿ ಭಾಷಾಂತರದ ವ್ಯತ್ಯಾಸದಿಂದಾಗಿ ವ್ಯತಿರಿಕ್ತ ಅರ್ಥ ಬರುವಂತಹ ನಿದರ್ಶನಗಳು ಕಂಡು ಬಂದಿವೆ. ಇದರಿಂದ ನ್ಯಾಯದಾನದಲ್ಲಿ ಅನ್ಯಾಯವುಂಟಾಗುವ ಸಾಧ್ಯತೆಗಳಿರುತ್ತವೆ. ಆದ್ದರಿಂದ ಇನ್ನು ಮುಂದೆ ತಜ್ಞರ ಸಾಕ್ಷ್ಯಗಳನ್ನು ಇಂಗ್ಲಿಷ್‌ನಲ್ಲೇ ದಾಖಲಿಸಿಕೊಳ್ಳಬೇಕು’ ಎಂದು ತಾಕೀತು ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.