
ಹನುಮಸಾಗರ (ಕೊಪ್ಪಳ ಜಿಲ್ಲೆ): ಬಾಲ್ಯ ಸ್ನೇಹಿತರಾಗಿದ್ದ ಇಬ್ಬರು ಸಾವಿನಲ್ಲಿಯೂ ಒಂದಾದ ಘಟನೆ ಸಮೀಪದ ಹೂಲಗೇರಿ ಗ್ರಾಮದಲ್ಲಿ ಭಾನುವಾರ ನಡೆದಿದೆ. ಮರಿಯಪ್ಪ ಕಟ್ಟಿಮನಿ (65)ಮತ್ತು ಬಸಪ್ಪ ಉಂಡಿ (65) ಸಾವಿನಲ್ಲೂ ಒಂದಾದ ಸ್ನೇಹಿತರು.
ಅನಾರೋಗ್ಯದಿಂದ ಬಳುಲುತ್ತಿದ್ದ ಮರಿಯಪ್ಪ ಅವರನ್ನು ಬಾಗಲಕೋಟೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದ ಅವರ ಪಾರ್ಥಿವ ಶರೀರವನ್ನು ಗ್ರಾಮಕ್ಕೆ ತರಲಾಗಿತ್ತು. ಗೆಳೆಯನ ಶವಕ್ಕೆ ಹಾರ ಹಾಕುವ ಸಂದರ್ಭದಲ್ಲಿ ಬಸಪ್ಪ ಅವರಿಗೆ ಹೃದಯಾಘಾತವಾಗಿ, ಅಲ್ಲಿಯೇ ಕುಸಿದು ಬಿದ್ದರು. ಆಸ್ಪತ್ರೆಗೆ ಸಾಗಿಸುವಾಗ ಅವರು ಮೃತಪಟ್ಟರು.
‘ಇಬ್ಬರೂ ಬಾಲ್ಯದಿಂದ ಅಪರೂಪದ ಸ್ನೇಹರಾಗಿದ್ದರು. ತಮ್ಮ ಅಲ್ಪಸ್ವಲ್ಪ ಜಮೀನಿನಲ್ಲಿ ಇಬ್ಬರೂ ಕೃಷಿ ಮಾಡುತ್ತಿದ್ದರು. ಉಳಿದಂತೆ ಇಬ್ಬರೂ ಒಂದೇ ಕಡೆ ಕೂಲಿಗೆ ಹೋಗುತ್ತಿದ್ದರು. ನಾವಿಬ್ಬರೂ ಸ್ಮಶಾನಕ್ಕೂ ಒಟ್ಟಿಗೆ ಹೋಗಬೇಕು ಎಂದು ಅವರು ಮಾತನಾಡಿಕೊಳ್ಳುತ್ತಿದ್ದರು’ ಎಂದು ಸ್ಥಳೀಯರು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.