ಪಣಂಬೂರು: ಮುಖ್ಯಮಂತ್ರಿ ಸದಾನಂದ ಗೌಡ ಅವರ ಬೆಂಗಾವಲಿನ ವಾಹನ ಡಿಕ್ಕಿ ಹೊಡೆದು ಪಾದಚಾರಿಯೊಬ್ಬರು ಸಾವನ್ನಪ್ಪಿದ ಘಟನೆ ಇಂದು ಬೆಳಿಗ್ಗೆ 8.15ರಲ್ಲಿ ಪಣಂಬೂರಿನಲ್ಲಿ ಸಂಭವಿಸಿದೆ.
ಮುಖ್ಯಮಂತ್ರಿ ಸದಾನಂದಗೌಡರು ಮನೆ ದೈವದ ಕೋಲಕ್ಕೆಂದು ಸುಳ್ಯಕ್ಕೆ ಹೋಗುತ್ತಿದ್ದಾಗ, ಪಣಂಬೂರಿನಲ್ಲಿ ಬೆಂಗಾವಲು ವಾಹನವು ಪಾದಚಾರಿಯೊಬ್ಬರಿಗೆ ಡಿಕ್ಕಿ ಹೊಡೆಯಿತು.
ಮೃತ ವ್ಯಕ್ತಿಯು ಕುರ್ನಾಡಿನ ಚಂದ್ರಹಾಸ್ (46) ಎಂದು ತಿಳಿದು ಬಂದಿದೆ. ಅವರು ಸಿಪಿಸಿ ಕಂಪನಿಯ ನೌಕರರಾಗಿದ್ದರು. ಮೃತ ದೇಹವನ್ನು ಖಾಸಗಿ ಆಸ್ಪತ್ರೆಯಲ್ಲಿ ಇಡಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.