ADVERTISEMENT

ಸಿಎನ್‌ಆರ್‌ಗೆ ಚೀನಾ ವಿಜ್ಞಾನ ಅಕಾಡೆಮಿ ಸದಸ್ಯತ್ವ

​ಪ್ರಜಾವಾಣಿ ವಾರ್ತೆ
Published 22 ನವೆಂಬರ್ 2013, 19:30 IST
Last Updated 22 ನವೆಂಬರ್ 2013, 19:30 IST

ಬೆಂಗಳೂರು: ಪ್ರತಿಷ್ಠಿತ ಚೀನಾ ವಿಜ್ಞಾನ ಅಕಾಡೆಮಿಯು ವಿದೇಶದ ತನ್ನ ಗೌರವ ಸದಸ್ಯರನ್ನಾಗಿ ‘ಭಾರತ ರತ್ನ’ ಪ್ರಶಸ್ತಿಗೆ ಭಾಜನರಾದ ಕನ್ನಡದ ಹೆಮ್ಮೆಯ ವಿಜ್ಞಾನಿ ಡಾ. ಸಿಎನ್ಆರ್ ರಾವ್ ಅವರನ್ನು ಆಯ್ಕೆ ಮಾಡಿದೆ.

ನೊಬೆಲ್‌ ಪುರಸ್ಕೃತರೂ ಸೇರಿ ಖ್ಯಾತ ವಿಜ್ಞಾನಿಗಳನ್ನು ಒಳಗೊಂಡ ಚೀನಾದ ಈ ಪ್ರತಿಷ್ಠಿತ ಸಂಸ್ಥೆಗೆ ಸದಸ್ಯರಾಗಿ ಆಯ್ಕೆಯಾದ ಭಾರತದ ಮೊದಲ ವಿಜ್ಞಾನಿ ಎಂಬ ಹಿರಿಮೆಗೆ ಸಿಎನ್‌ಆರ್‌ ಪಾತ್ರರಾಗಿದ್ದಾರೆ.

ಚೀನಾ ವಿಜ್ಞಾನ ಅಕಾಡೆಮಿ­ಯಿಂದ ಕಳೆದ ವರ್ಷ ಸಿಎನ್‌ಆರ್‌ ಅವರಿಗೆ ‘ಅಂತರರಾಷ್ಟ್ರೀಯ ವೈಜ್ಞಾನಿಕ ಸಹಕಾರ’ ಪ್ರಶಸ್ತಿ ಲಭಿಸಿತ್ತು. ಪ್ರಪಂಚದ ಹಲವು ವಿಶ್ವವಿದ್ಯಾಲಯಗಳಿಂದ 60ಕ್ಕೂ ಅಧಿಕ ಗೌರವ ಡಾಕ್ಟರೇಟ್‌ಗಳೂ ಅವರನ್ನು ಅಲಂಕರಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.