ADVERTISEMENT

ಸಿದ್ಧಗೊಳ್ಳುತ್ತಿದೆ ವಿಶಿಷ್ಟ ಮತಗಟ್ಟೆ

ಸ್ವೀಪ್‌ ಸಮಿತಿ ವತಿಯಿಂದ 7 ಬೂತ್‌ಗಳು ನಿರ್ಮಾಣ

​ಪ್ರಜಾವಾಣಿ ವಾರ್ತೆ
Published 10 ಮೇ 2018, 19:54 IST
Last Updated 10 ಮೇ 2018, 19:54 IST
ಹುಣಸೂರು ತಾಲ್ಲೂಕಿನ ನಾಗಾಪುರ ಗಿರಿಜನ ಪುನರ್ವಸತಿ ಕೇಂದ್ರದಲ್ಲಿ ಗುರುವಾರ ಸ್ವೀಪ್‌ ಸಮಿತಿ ಜೇನುಕುರುಬ ಮತಗಟ್ಟೆಯನ್ನು ಗುಡಿಸಲು ಮಾದರಿಯಲ್ಲಿ ನಿರ್ಮಿಸುತ್ತಿರುವ ದೃಶ್ಯ
ಹುಣಸೂರು ತಾಲ್ಲೂಕಿನ ನಾಗಾಪುರ ಗಿರಿಜನ ಪುನರ್ವಸತಿ ಕೇಂದ್ರದಲ್ಲಿ ಗುರುವಾರ ಸ್ವೀಪ್‌ ಸಮಿತಿ ಜೇನುಕುರುಬ ಮತಗಟ್ಟೆಯನ್ನು ಗುಡಿಸಲು ಮಾದರಿಯಲ್ಲಿ ನಿರ್ಮಿಸುತ್ತಿರುವ ದೃಶ್ಯ   

ಹುಣಸೂರು: ಸ್ವೀಪ್‌ ಸಮಿತಿ ವತಿಯಿಂದ ಈ ಬಾರಿ ತಾಲ್ಲೂಕಿನಲ್ಲಿ ವಿಶೇಷವಾಗಿ 7 ಬೂತ್ ಗಳನ್ನು ನಿರ್ಮಿಸಲಾಗಿದೆ ಎಂದು ತಾ ಸ್ವೀಪ್‌ ಸಮಿತಿ ಅಧ್ಯಕ್ಷ ಕೃಷ್ಣಕುಮಾರ್‌ ತಿಳಿಸಿದ್ದಾರೆ.

ತಾಲ್ಲೂಕಿನ ನಾಗಾಪುರ ಗಿರಿಜನ ಹಾಡಿಯಲ್ಲಿ ಗಿರಿಜನರ ಸಂಸ್ಕೃತಿ ಪರಂಪರೆ ಪ್ರತಿಬಿಂಬಿಸುವ ರೀತಿಯಲ್ಲಿ ಮತಗಟ್ಟೆ ನಿರ್ಮಿಸಲಾಗಿದೆ. ಈ ಕೇಂದ್ರದಲ್ಲಿ ಕರ್ತವ್ಯ ನಿರ್ವಹಿಸುವ ಸಿಬ್ಬಂದಿ ಬಿಳಿ ಪಂಚೆ ಮತ್ತು ಶರ್ಟ್‌ ತೊಟ್ಟು ಮೈಸೂರು ಪೇಟ ಧರಿಸಲಿದ್ದಾರೆ.

ಮತಗಟ್ಟೆಗೆ ಬರುವ ಮತದಾರರಿಗೆ ವಿಶೇಷವಾಗಿ ವಿವಿಧ ಬೇರುಗಳ ಪಾನಕ ನೀಡುವ ಉದ್ದೇಶ ಹೊಂದಲಾಗಿದೆ ಎಂದು ತಿಳಿಸಿದರು.

ADVERTISEMENT

ತಾಲ್ಲೂಕಿನ 7 ಮತಗಟ್ಟೆಗಳಲ್ಲಿ 2 ಪಿಂಕ್‌, ಮೂರು ವಿಶೇಷ ಮತಗಟ್ಟೆ ಮತ್ತು ಒಂದು ಅಂಗವಿಕಲ ಮತಗಟ್ಟೆಯನ್ನು ತೆರೆಯುವ ಮೂಲಕ ಮತದಾರರಿಗೆ ವಿಶೇಷ ಅನುಕೂಲ ಕಲ್ಪಿಸಿ ಮತದಾನ ಪ್ರವಾಣ ಹೆಚ್ಚಿಸುವ ಪ್ರಯತ್ನ ಇದಾಗಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.