ADVERTISEMENT

ಸ್ವಾಮಿ ಪೊನ್ನಾಚಿಗೆ ಛಂದ ಪುಸ್ತಕ ಬಹುಮಾನ

​ಪ್ರಜಾವಾಣಿ ವಾರ್ತೆ
Published 23 ಮೇ 2018, 18:48 IST
Last Updated 23 ಮೇ 2018, 18:48 IST
ಸ್ವಾಮಿ ಪೊನ್ನಾಚಿ
ಸ್ವಾಮಿ ಪೊನ್ನಾಚಿ   

ಬೆಂಗಳೂರು: ಈ ಸಾಲಿನ ಛಂದ ಪುಸ್ತಕ ಬಹುಮಾನಕ್ಕೆ ಸ್ವಾಮಿ ಪೊನ್ನಾಚಿ ಅವರ ಕತೆಗಳ ಹಸ್ತಪ್ರತಿ ಆಯ್ಕೆಯಾಗಿದೆ. ಮೂಲತಃ ಕೊಳ್ಳೆಗಾಲ ತಾಲ್ಲೂಕಿನ ಪೊನ್ನಾಚಿಯವರಾದ ಸ್ವಾಮಿ, ಪ್ರಸ್ತುತ ಯಳಂದೂರಿನಲ್ಲಿ ಶಿಕ್ಷಕರು.

ಈ ಬಾರಿ ಕತೆಗಾರ ಎಂ.ಎಸ್‌. ಶ್ರೀರಾಮ್‌ ಸ್ಪರ್ಧೆಯ ತೀರ್ಪುಗಾರರಾಗಿದ್ದರು. ನಾಡಿನ ಯುವಕತೆಗಾರರನ್ನು ಗುರುತಿಸುವ ಈ ಸ್ಪರ್ಧೆಗೆ 60ಕ್ಕೂ ಹೆಚ್ಚು ಹಸ್ತಪ್ರತಿಗಳು ಬಂದಿದ್ದವು.

ಬಹುಮಾನಿತ ಹಸ್ತಪ್ರತಿಯ ಪುಸ್ತಕವನ್ನು ಪ್ರಕಟಿಸಿ, ಕತೆಗಾರರಿಗೆ ₹ 30 ಸಾವಿರ ನಗದು ಬಹುಮಾನ, ಪ್ರಶಸ್ತಿ ಪತ್ರ ಮತ್ತು ಪಾರಿತೋಷಕವನ್ನು ನೀಡಲಾಗುತ್ತದೆ. ಹಸ್ತಪ್ರತಿಗಳ ಮೊದಲ ಸುತ್ತಿನ ಆಯ್ಕೆಯನ್ನು ಶ್ರೀಕಾಂತ ಉಡುಪ, ಕರ್ಕಿ ಕೃಷ್ಣಮೂರ್ತಿ ಮತ್ತು ವಸುಧೇಂದ್ರ ಮಾಡಿದ್ದಾರೆ. ಜೂನ್‌ 10ರಂದು ಬೆಂಗಳೂರಿನಲ್ಲಿ ಪುಸ್ತಕ ಬಿಡುಗಡೆ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.