
ಪ್ರಜಾವಾಣಿ ವಾರ್ತೆ
ಹಳಿಯಾಳ (ಉತ್ತರ ಕನ್ನಡ): ಜೆಡಿಎಸ್ ಪಕ್ಷದ ವತಿಯಿಂದ ಮತದಾರರಿಗೆ ವಿತರಿಸಲು ತರಲಾಗಿತ್ತು ಎನ್ನಲಾದ 150ಕ್ಕೂ ಹೆಚ್ಚು ಸೀರೆಗಳನ್ನು ತಾಲ್ಲೂಕಿನ ಪಾಂಡರವಾಳ ಗ್ರಾಮದಲ್ಲಿ ಪೊಲೀಸರು ಬುಧವಾರ ಮಧ್ಯರಾತ್ರಿ ವಶಪಡಿಸಿಕೊಂಡರು. ಸರಕು ಸಾಗಣೆ ವಾಹನದಲ್ಲಿ ಸೀರೆಗಳನ್ನು ತರಲಾಗಿದೆ ಎಂಬ ಮಾಹಿತಿ ಆಧರಿಸಿ ಪೊಲೀಸರು ದಾಳಿ ನಡೆಸಿದರು.
‘ವಾಹನ ಚಾಲಕನನ್ನು ವಿಚಾರಿಸಿದಾಗ, ಜೆಡಿಎಸ್ ವತಿಯಿಂದ ವಿತರಿಸಲು ಸೀರೆ ತರಲಾಗಿದೆ ಎಂದು ತಿಳಿಸಿದ್ದರಿಂದ ಪ್ರಕರಣ ದಾಖಲಿಸಿಕೊಳ್ಳಲಾಗಿದೆ’ ಎಂದು ತಹಶೀಲ್ದಾರ್ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.