ADVERTISEMENT

ಹಕ್ಕುಪತ್ರ ವಿತರಿಸಲು ಲೋಕಾಯುಕ್ತರ ಆದೇಶ

​ಪ್ರಜಾವಾಣಿ ವಾರ್ತೆ
Published 10 ಡಿಸೆಂಬರ್ 2013, 19:30 IST
Last Updated 10 ಡಿಸೆಂಬರ್ 2013, 19:30 IST

ಬೆಂಗಳೂರು: ಆಶ್ರಯ ಯೋಜನೆ ಮತ್ತು ಇತರ ವಸತಿ ಯೋಜನೆಗಳ ಅಡಿ ನಿವೇಶನ ಪಡೆದುಕೊಂಡವರಿಗೆ ಹಕ್ಕುಪತ್ರ ನೀಡಬೇಕು ಎಂದು ಲೋಕಾಯುಕ್ತ ನ್ಯಾಯಮೂರ್ತಿ ವೈ. ಭಾಸ್ಕರ ರಾವ್‌ ಅವರು ವಸತಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ಇ.ವಿ. ರಮಣ ರೆಡ್ಡಿ ಅವರಿಗೆ ಮಂಗಳವಾರ ನಿರ್ದೇಶನ ನೀಡಿದ್ದಾರೆ.

ನಿವೇಶನ ಪಡೆದು ಮನೆ ನಿರ್ಮಿಸಿಕೊಂಡವರಿಗೆ ಹಕ್ಕುಪತ್ರ ನೀಡಬೇಕು, ನಿವೇಶನ ಮಾತ್ರ ಪಡೆದುಕೊಂಡವರಿಗೆ ಹಕ್ಕುಪತ್ರದ ದೃಢೀಕೃತ ಜೆರಾಕ್ಸ್‌ ಪ್ರತಿ ನೀಡಬೇಕು ಎಂದು ಲೋಕಾಯುಕ್ತರು ತಾಕೀತು ಮಾಡಿದ್ದಾರೆ.

ಆಶ್ರಯ ಯೋಜನೆಯ ಅಡಿ ನಿವೇಶನ, ಮನೆ ಪಡೆಯಲು ಲಂಚ ಕೊಡಬೇಕು ಎಂಬ ದೂರುಗಳು ಲೋಕಾಯುಕ್ತರಿಗೆ ಬಂದಿದ್ದವು.  ಹೀಗಾಗಿ ಕಾರ್ಯದರ್ಶಿ  ಜೊತೆ ಬೆಂಗಳೂರಿನಲ್ಲಿ ಸಮಾಲೋಚನೆ ನಡೆಸಿ, ‘ಆಶ್ರಯ ಮತ್ತು ಇತರ ಯೋಜನೆಗಳ ಅಡಿ ರಾಜ್ಯದಲ್ಲಿ ಎಷ್ಟು ನಿವೇಶನ ವಿತರಿಸಲಾಗಿದೆ? ಎಷ್ಟು ಪ್ರಕರಣಗಳಲ್ಲಿ ಹಕ್ಕುಪತ್ರ ನೀಡಲಾಗಿದೆ ಮತ್ತು ಎಷ್ಟು ಪ್ರಕರಣಗಳಲ್ಲಿ ಹಕ್ಕುಪತ್ರವನ್ನು ಇನ್ನೂ ನೀಡಿಲ್ಲ?’ ಎಂಬ ವಿವರಗಳನ್ನು ಜನವರಿ 17ರೊಳಗೆ ನೀಡಬೇಕು ಎಂದು ಲೋಕಾಯುಕ್ತರು ಸೂಚಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.