ADVERTISEMENT

ಹಾಲು ಉತ್ಪಾದಕರ ಸಮಾವೇಶ

​ಪ್ರಜಾವಾಣಿ ವಾರ್ತೆ
Published 22 ಫೆಬ್ರುವರಿ 2014, 19:30 IST
Last Updated 22 ಫೆಬ್ರುವರಿ 2014, 19:30 IST
ಕರ್ನಾಟಕ ಹಾಲು ಮಹಾಮಂಡಳಿ (ಕೆಎಂಎಫ್‌) ನಗರದಲ್ಲಿ ಶನಿವಾರ ಆಯೋಜಿಸಿದ್ದ ಹಾಲು ಉತ್ಪಾದಕರ ಸಮಾವೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದ ರೈತ ಮಹಿಳೆಯರು
ಕರ್ನಾಟಕ ಹಾಲು ಮಹಾಮಂಡಳಿ (ಕೆಎಂಎಫ್‌) ನಗರದಲ್ಲಿ ಶನಿವಾರ ಆಯೋಜಿಸಿದ್ದ ಹಾಲು ಉತ್ಪಾದಕರ ಸಮಾವೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದ ರೈತ ಮಹಿಳೆಯರು   

ಬೆಂಗಳೂರು: ಕರ್ನಾಟಕ ಹಾಲು ಮಹಾ­ಮಂಡಳಿ (ಕೆಎಂಎಫ್‌) ನಗರದಲ್ಲಿ ಶನಿ­ವಾರ ಆಯೋಜಿಸಿದ್ದ ಹಾಲು ಉತ್ಪಾದ­ಕರ  ಸಮಾವೇಶದಲ್ಲಿ ರಾಜ್ಯದ ವಿವಿಧ ಭಾಗಗಳ ಅಸಂಖ್ಯಾತ ರೈತರು ಪಾಲ್ಗೊಂಡಿದ್ದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಸಮಾ­ವೇಶ ಉದ್ಘಾಟಿಸಿದರು. ನಂದಿನಿ ಉತ್ಪನ್ನ­ಗಳ ಪ್ರಚಾರ ರಾಯಭಾರಿ, ನಟ ಪುನೀತ್‌ ರಾಜ್‌ಕುಮಾರ್‌ ಅವರನ್ನು  ಸನ್ಮಾನಿಸಲಾಯಿತು.

ಕಾಲುಬಾಯಿ ಜ್ವರ ತಡೆಗಟ್ಟಲು ತೆಗೆದುಕೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳು ಹಾಗೂ ಲಸಿಕೆ ಹಾಕಿಸುವ ಬಗ್ಗೆ  ಕೈಪಿಡಿಯನ್ನು ಹಂಚಲಾಯಿತು.
ಸಮಾವೇಶದಲ್ಲಿ ಪಾಲ್ಗೊಂಡವರಿಗೆ ಹಂಚಲು ತಂದಿದ್ದ ನಂದಿನಿ ಮಜ್ಜಿಗೆ  ಹಾಗೂ ನೀರಿನ ಪ್ಯಾಕೆಟ್‌ಗಳನ್ನು ಸರಿ­ಯಾಗಿ ವಿತರಿಸದ ಕಾರಣ ನೂರಾರು ಪ್ಯಾಕೆಟ್‌ಗಳು ನೆಲಕ್ಕೆ ಬಿದ್ದು ವ್ಯರ್ಥ­ವಾದವು. ಸಮಾವೇಶ ನಡೆದ ಬೆಂಗ­ಳೂರು ಅಂತರರಾಷ್ಟ್ರೀಯ ವಸ್ತು­ಪ್ರದರ್ಶನ ಕೇಂದ್ರದ ಮುಂಭಾಗದ ಮೈದಾನದಲ್ಲಿ ಜನ ಜಮಾಯಿಸಿದ್ದರಿಂದ ತುಮಕೂರು ರಸ್ತೆಯಲ್ಲಿ ಸಂಚಾರ ದಟ್ಟಣೆ ಉಂಟಾಯಿತು.

ಪ್ರಯಾಣಿಕರು ಗಂಟೆಗಟ್ಟಲೆ ರಸ್ತೆಯ ಮೇಲೆಯೆ ಕಾಲ ಕಳೆಯುವಂತಾಯಿತು. ಸಂಜೆ ಆರು ಗಂಟೆಯವರೆಗೂ ಯಶವಂತಪುರದಿಂದ ನೆಲಮಂಗಲ ಕ್ರಾಸ್‌ವರೆಗಿನ ರಸ್ತೆಯಲ್ಲಿ ವಾಹನಗಳು  ನಿಧಾನಗತಿಯಲ್ಲಿ ಸಂಚರಿಸಿದವು.

ಸಿದ್ದರಾಮಯ್ಯ ನನ್ನ ಗುರು !
‘ಸಿದ್ದರಾಮಯ್ಯ ನನ್ನ ಗುರು. ನಾನು ಬೇರೆ ಪಕ್ಷದಲ್ಲಿದ್ದರೂ ಅವರು ನನ್ನ ಗುರುಗಳು. ಮೊದಲಿನಿಂದಲೂ ಅವರು ನನಗೆ ಮೆಚ್ಚಿನವರು’ ಎಂದು ಕೆಎಂಎಫ್‌ ಅಧ್ಯಕ್ಷ ಸೋಮಶೇಖರ ರೆಡ್ಡಿ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.