ADVERTISEMENT

‘ಕಬ್ಬಿಗೆ ` 2,500 ನೀಡಲು ಸಾಧ್ಯವೇ ಇಲ್ಲ’

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2013, 19:30 IST
Last Updated 3 ಡಿಸೆಂಬರ್ 2013, 19:30 IST

ಸುವರ್ಣಸೌಧ (ಬೆಳಗಾವಿ): ರಾಜ್ಯ ಸರ್ಕಾರ ನಿಗದಿಪಡಿಸಿದಂತೆ ಪ್ರತಿ ಟನ್ ಕಬ್ಬಿಗೆ ₨ ೨,೫೦೦ ನೀಡಲು ಸಾಧ್ಯ ವಿಲ್ಲ ಎಂದು ಸಕ್ಕರೆ ಕಾರ್ಖಾನೆಗಳ ಪ್ರತಿನಿಧಿ ಗಳು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮತ್ತೊಮ್ಮೆ ಸ್ಪಷ್ಟಪಡಿಸಿದ್ದಾರೆ. ಕಾರ್ಖಾನೆಗಳ ೧೮ ಪ್ರತಿನಿಧಿಗಳು ಮಂಗಳವಾರ ಸಂಜೆ ಮುಖ್ಯಮಂತ್ರಿ ಅವರನ್ನು ಇಲ್ಲಿ ಭೇಟಿ ಮಾಡಿ ತಮ್ಮ ಕಷ್ಟವನ್ನು ವಿವರಿಸಿದರು.

ಕಬ್ಬಿನ ಬೆಲೆಗೆ ಸಂಬಂಧಿಸಿದಂತೆ ಕೇಂದ್ರ ಕೃಷಿ ಸಚಿವ ಹಾಗೂ ಪ್ರಧಾನಿ ಅವರ ಜೊತೆ ತಾವು ಡಿ.೬ರಂದು ದೆಹಲಿಯಲ್ಲಿ ಮಾತುಕತೆ ನಡೆಸಲಿದ್ದು ಆ ನಂತರ ಈ ಬಗ್ಗೆ ಮಾತ ನಾಡುವುದಾಗಿ ಸಿ.ಎಂ ತಿಳಿಸಿದರು. ದೆಹಲಿಯಿಂದ ವಾಪಸಾದ ನಂತರ ಬೆಂಗಳೂರಿನಲ್ಲಿ (ಡಿ.೯) ಮತ್ತೆ ಸಕ್ಕರೆ ಕಾರ್ಖಾನೆ ಮಾಲೀಕರೊಂದಿಗೆ ಸಭೆ ನಡೆಸುವುದಾಗಿ ಅವರು ತಿಳಿಸಿದರು.

ತನಿಖೆಗೆ ಶುಕ್ಲಾ ನೇಮಕ
ಬೆಳಗಾವಿ: ಕಬ್ಬಿಗೆ ಸೂಕ್ತ ಬೆಲೆ ನೀಡುವಂತೆ ಆಗ್ರಹಿಸಿ ರಾಯಬಾಗ ತಾಲ್ಲೂಕಿನ ಕಂಕಣವಾಡಿಯ ರೈತ ವಿಠ್ಠಲ ಅರಭಾವಿ ಆತ್ಮಹತ್ಯೆ ಮಾಡಿಕೊಂಡ ಪ್ರಕರಣದ ಮ್ಯಾಜಿ ಸ್ಟ್ರೇಟ್‌ ತನಿಖೆ ನಡೆಸಲು ಧಾರ ವಾಡದ ಜಿಲ್ಲಾಧಿಕಾರಿ ಸಮೀರ್‌ ಶುಕ್ಲಾ ಅವರನ್ನು ನೇಮಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
‘ಮಂಗಳವಾರ ಸರ್ಕಾರದಿಂದ ಆದೇಶ ಬಂದಿದೆ. 60 ದಿನಗಳ ಒಳಗೆ ತನಿಖೆ ನಡೆಸಿ, ವರದಿ ನೀಡು ವಂತೆ ಸೂಚಿಸಲಾಗಿದೆ. ಶೀಘ್ರ ದಲ್ಲೇ ತನಿಖೆ ಆರಂಭಿಸಲಾಗು ವುದು’ ಎಂದು ಸಮೀರ್‌ ಶುಕ್ಲಾ ‘ಪ್ರಜಾವಾಣಿ’ ಗೆ ತಿಳಿಸಿದರು.

ADVERTISEMENT

ಆತ್ಮಹತ್ಯೆಗೆ ಮತ್ತೊಬ್ಬ ಕಬ್ಬು ಬೆಳೆಗಾರ ಯತ್ನ
ದಾವಣಗೆರೆ: ಕಬ್ಬು ಕಟಾವು ಮಾಡಲು ಸಕ್ಕರೆ ಕಾರ್ಖಾನೆಯಿಂದ ಅನುಮತಿ ದೊರೆಯಲಿಲ್ಲ ಎಂದು ಬೇಸರಗೊಂಡ ಕಬ್ಬು ಬೆಳೆಗಾರ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಹರಿಹರ ತಾಲ್ಲೂಕಿನ ನಂದಿಗಾವಿಯಲ್ಲಿ ಮಂಗಳವಾರ ನಡೆ ದಿದೆ. ಹಾಲನಗೌಡ ಆತ್ಮಹತ್ಯೆಗೆ ಯತ್ನಿಸಿದ ಬೆಳೆಗಾರ. ನಗರದ ಖಾಸಗಿ ಆಸ್ಪತ್ರೆ ಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಆತನ ಸ್ಥಿತಿ ಗಂಭೀರವಾಗಿದೆ. ಸೋಮ ವಾರ ರಾತ್ರಿಯೂ ಕೂಡ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಯತ್ನಿಸಿ ದ್ದರು ಎಂದು ಕುಟುಂಬದ ಸದಸ್ಯರು ತಿಳಿಸಿದ್ದಾರೆ.

‘ಸುಮಾರು ಎರಡೂವರೆ ಎಕರೆಯಲ್ಲಿ ಕಬ್ಬು ಬೆಳೆದಿದ್ದು, ಕಟಾವಿಗೆ ಸಕ್ಕರೆ ಕಾರ್ಖಾನೆಯಿಂದ ಅನುಮತಿ ದೊರೆತಿರಲಿಲ್ಲ. ಕಬ್ಬು ನಾಟಿ ಮಾಡಿ 16 ತಿಂಗಳು ಕಳೆದಿದ್ದು, ಕಬ್ಬು ಗದ್ದೆಯಲ್ಲಿಯೇ ಒಣಗುತ್ತಿದೆ. ಇದರಿಂದ ನೊಂದು ವಿಷ ಸೇವಿ ಸಿದ್ದಾರೆ. ಬ್ಯಾಂಕ್‌ ಹಾಗೂ ಖಾಸಗಿಯವರಿಂದ ₨ 2 ಲಕ್ಷದಷ್ಟು ಸಾಲ ಪಡೆದಿ ದ್ದರು. ಮರುಪಾವತಿ ಮಾಡುವಂತೆ ಸಾಲಗಾರರು ಕೇಳುತ್ತಿದ್ದರು.

ದಾವಣ ಗೆರೆ ಜಿಲ್ಲೆಯ ಶಾಮನೂರು ಸಕ್ಕರೆ ಕಾರ್ಖಾನೆ, ದಾವಣಗೆರೆ ಸಕ್ಕರೆ ಕಾರ್ಖಾನೆ ಗಳಿಗೆ ಮಾತ್ರ ಕಬ್ಬು ಪೂರೈಕೆ ಮಾಡಬೇಕು ಎಂದು ಸರ್ಕಾರ ಆದೇಶಿಸಿದೆ. ಆ ಕಾರ್ಖಾ ನೆಗಳು ಕಬ್ಬು ಕಟಾವು ಮಾಡಲು ಇದುವರೆಗೂ ಅನುಮತಿ ನೀಡಿಲ್ಲ. ಮುಂಡ ರಗಿ, ಸಂಗೂರು ಕಾರ್ಖಾನೆಗಳಿಗೂ ಕಬ್ಬು ಪೂರೈಸಲು ಅನುಮತಿ ನೀಡುತ್ತಿಲ್ಲ ’ ಎಂದು ಹಾಲೇಶಪ್ಪ ಅವರ ಸಹೋದರ ಕೊಟ್ರೇಶ್‌ ಆರೋಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.