
ಪ್ರಜಾವಾಣಿ ವಾರ್ತೆಗುಲ್ಬರ್ಗ: ಯಾವುದೇ ಪಕ್ಷದಿಂದ ಟಿಕೆಟ್ ನೀಡಿದರೂ ಈ ಬಾರಿ ಲೋಕಸಭೆ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ಮಾಜಿ ಸಚಿವ ವೈಜನಾಥ ಪಾಟೀಲ ಗುರುವಾರ ಸ್ಪಷ್ಟಪಡಿಸಿದರು.
‘ರಾಷ್ಟ್ರೀಯ ಪಕ್ಷಗಳಲ್ಲೇ ಸಾಕಷ್ಟು ಸ್ಪರ್ಧೆ ಏರ್ಪಟ್ಟಿದೆ. ಸುಖಾಸುಮ್ಮನೆ ಕಷ್ಟ ಅನುಭವಿಸಲು ಇಷ್ಟವಿಲ್ಲ. ಕಾಂಗ್ರೆಸ್, ಬಿಜೆಪಿ ಟಿಕೆಟ್ ಕೊಡದಿದ್ದರೂ ಬೇರೆ ಪಕ್ಷದವರು ಟಿಕೆಟ್ ನೀಡುವುದಕ್ಕೆ ಮುಂದೆ ಬಂದಿದ್ದರು’ ಎಂದು ‘ಪ್ರಜಾವಾಣಿ’ಗೆ ದೂರವಾಣಿ ಮೂಲಕ ತಿಳಿಸಿದರು.
‘ಹೈದರಾಬಾದ್ ಕರ್ನಾಟಕ ಭಾಗದಲ್ಲಿ ಕಾಂಗ್ರೆಸ್ ಪಕ್ಷ ಬೆಂಬಲಿಸಬೇಕೆನ್ನುವುದು ನನ್ನ ವೈಯಕ್ತಿಕ ಇಚ್ಛೆ. ಆದರೆ ಸಮಾನ ಮನಸ್ಕರ ಸಲಹೆ ಪಡೆಯದೇ ಅಂತಿಮ ನಿರ್ಧಾರ ಕೈಗೊಳ್ಳುವುದಿಲ್ಲ. ಶೀಘ್ರದಲ್ಲೆ ಬೆಂಬಲಿಗರೆಲ್ಲರ ಸಭೆ ಕರೆದು, ಸಲಹೆ ಪಡೆಯುತ್ತೇನೆ. ಅನಂತರ ಚುನಾವಣೆಯಲ್ಲಿ ಬೆಂಬಲಿಸುವ ಅಭ್ಯರ್ಥಿ ಕುರಿತು ಅಧಿಕೃತವಾಗಿ ಮಾತನಾಡುತ್ತೇನೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.