ಮೈಸೂರು: ‘-ಕೊಡಗು–ಮೈಸೂರು ಲೋಕಸಭಾ ಕ್ಷೇತ್ರ ಬಿಜೆಪಿ ಅಭ್ಯರ್ಥಿ ಆಯ್ಕೆಯಲ್ಲಿ ಪಕ್ಷದ ವರಿಷ್ಠರ ತೀರ್ಮಾನ ನನಗೆ ನೋವುಂಟು ಮಾಡಿದೆ’ ಎಂದು ವಿಧಾನ ಪರಿಷತ್ ಸದಸ್ಯ ಸಿ.ಎಚ್. ವಿಜಯಶಂಕರ್ ತೀವ್ರ ಬೇಸರ ವ್ಯಕ್ತಪಡಿಸಿದರು.
 
 ವಿಜಯನಗರದ ತಮ್ಮ ನಿವಾಸ-ದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಜಿಲ್ಲಾ ಘಟಕದಿಂದ ಮೂವರ ಹೆಸರನ್ನು ಕಳುಹಿಸಲಾಗಿತ್ತು. ಆದರೆ ಸ್ಥಳೀಯ ಮುಖಂಡರು, ಆಕಾಂಕ್ಷಿಗಳ ಜತೆ ಚರ್ಚಿಸದೇ ರಾಜ್ಯ ನಾಯಕರು ಈ ತೀರ್ಮಾನಕ್ಕೆ ಬಂದಿರುವುದು ಅಸಮಾಧಾನ ತಂದಿದೆ’ ಎಂದರು.
 
 ಕಾಂಗ್ರೆಸ್ ಸಂಸ್ಕೃತಿ:‘ಪಕ್ಷದ ಪ್ರಾಥಮಿಕ ಸದಸ್ಯತ್ವ ಇಲ್ಲದವರಿಗೆ ಟಿಕೆಟ್ ಕೊಡುವ ಸಂಸ್ಕೃತಿ ಕಾಂಗ್ರೆಸ್ಸಿನದ್ದು. ಬಿಜೆಪಿಯಲ್ಲಿ ಇಂತಹ ಸಂಸ್ಕೃತಿ ಇಲ್ಲ. ನನ್ನ ಈವರೆಗಿನ ರಾಜಕೀಯ ಜೀವನದಲ್ಲಿ ಇದೇ ಮೊದಲ ಬಾರಿಗೆ ಇಂತಹ ಬೆಳವಣಿಗೆ ನಡೆದಿದೆ. ಹೀಗಾಗಿ ಪಕ್ಷದ ವರಿಷ್ಠರ ನಿರ್ಧಾರ ಆಘಾತ ತಂದಿದೆ’ ಎಂದು ಹೇಳಿದರು.
 
 ‘ಮೂಲತಃ ಹಾಸನ ಜಿಲ್ಲೆಯವರಾದ ಪ್ರತಾಪ್ ಸಿಂಹ ಅವರನ್ನು ಅಲ್ಲಿಗೆ ಕಳುಹಿಸಲಿ’ ಎಂದರು.
 ‘ಪಕ್ಷ ಬಿಡಲು ನಿರ್ಧರಿಸಿಲ್ಲ’: ‘ಟಿಕೆಟ್ ವಿಚಾರಕ್ಕಾಗಿ ಸದ್ಯಕ್ಕೆ ಪಕ್ಷ ಬಿಡಲು ನಿರ್ಧರಿಸಿಲ್ಲ. ರಾಜ್ಯ ನಾಯಕರ ತೀರ್ಮಾನ ನೋವು ತಂದಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.