ಹುಬ್ಬಳ್ಳಿ: ಯಾವುದೇ ದಾಖಲೆ ಇಲ್ಲದೇ ಸಾಗಿಸುತ್ತಿದ್ದ ₨2.30 ಲಕ್ಷ ನಗದನ್ನು ತಾಲ್ಲೂಕಿನ ಅಗಡಿ ಚೆಕ್ಪೋಸ್ಟ್ ಬಳಿ ಗ್ರಾಮೀಣ ಠಾಣೆ ಪೊಲೀಸರು ಶನಿವಾರ ವಶಪಡಿಸಿಕೊಂಡಿದ್ದು, ಈ ಸಂಬಂಧ ಇಬ್ಬರನ್ನು ಬಂಧಿಸಿದ್ದಾರೆ.
ಶಿರಸಿಯ ಸೋಮಾಪುರ ಗುಡ್ಡ ನಿವಾಸಿ ಕೃಷ್ಣ ಕೊರವರ ಹಾಗೂ ಮಂಜುನಾಥ ಪಿಳ್ಳೈ ಬಂಧಿತರು, ಬೆಳಿಗ್ಗೆ 9 ಸುಮಾರಿಗೆ ಅಧಿಕಾರಿಗಳು ವಾಹನ ತಪಾಸಣೆಯಲ್ಲಿ ತೊಡಗಿದ್ದ ಸಂದರ್ಭ ಕಾರಿನಲ್ಲಿ ಹಣ ಪತ್ತೆಯಾಗಿದೆ.
‘ಗ್ರಾನೈಟ್ ಕಲ್ಲು ತರಲು ಶಿರಸಿಯಿಂದ ಇಳಕಲ್‌ಗೆ ಹಣವನ್ನು ಒಯ್ಯುತ್ತಿದ್ದುದಾಗಿ ಬಂಧಿತರಿಬ್ಬರು ತಿಳಿಸಿದ್ದಾರೆ. ಅವರು ಸಮರ್ಪಕ ದಾಖಲೆಗಳನ್ನು ಒದಗಿಸದ ಕಾರಣ ಹಣವನ್ನು ವಶಪಡಿಸಿಕೊಳ್ಳಲಾಗಿದೆ’ ಎಂದು ಎಸ್‌ಎಸ್‌ಟಿ ಮ್ಯಾಜಿಸ್ಟ್ರೇಟ್ ಬಸವರಾಜ ಕುಸುಗಲ್ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.