ADVERTISEMENT

10ರ ಒಳಗೆ 15 ಜೆಡಿಎಸ್‌ ಅಭ್ಯರ್ಥಿಗಳ ಪಟ್ಟಿ: ಕೃಷ್ಣಪ್ಪ

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2014, 19:30 IST
Last Updated 2 ಮಾರ್ಚ್ 2014, 19:30 IST

ಹುಬ್ಬಳ್ಳಿ: ಲೋಕಸಭಾ ಚುನಾವಣೆಗೆ ಸ್ಪರ್ಧಿಸುವ 15 ಅಭ್ಯರ್ಥಿಗಳ ಪಟ್ಟಿ­ಯನ್ನು ಇದೇ 10ರ ಒಳಗಾಗಿ ಬಿಡುಗಡೆ  ಮಾಡಲಾಗುವುದು ಎಂದು ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಎ.ಕೃಷ್ಣಪ್ಪ ಭಾನುವಾರ ಇಲ್ಲಿ ತಿಳಿಸಿದರು.

‘28 ಕ್ಷೇತ್ರಗಳಲ್ಲಿಯೂ ಅಭ್ಯರ್ಥಿ­ಗಳನ್ನು ಕಣಕ್ಕೆ ಇಳಿಸುವ ನಿಟ್ಟಿನಲ್ಲಿ ಸಿದ್ಧತೆ ನಡೆದಿದೆ. ತೃತೀಯ ರಂಗ ರಚನೆ ಕುರಿ­ತಂತೆ ಸ್ಪಷ್ಟ ಚಿತ್ರಣ ದೊರಕಿದರೆ ಸಂದ­ರ್ಭ­ಕ್ಕೆ ಅನುಗುಣವಾಗಿ ಹೊಂದಾ­­ಣಿಕೆ ಮಾಡಿಕೊಳ್ಳಲಾಗುವುದು.

ಧಾರವಾಡದಿಂದ ಸ್ಪರ್ಧಿಸಲು 6 ಜನ ಆಕಾಂಕ್ಷಿಗಳಿದ್ದು, ಇನ್ನೂ ಅಂತಿಮ ನಿರ್ಧಾರ ತೆಗೆದುಕೊಂಡಿಲ್ಲ’ ಎಂದು ಸ್ಪಷ್ಟಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.