ADVERTISEMENT

ಏಪ್ರಿಲ್‌ನಲ್ಲಿ ಬ್ಯಾಂಕ್‌ಗೆ 10 ದಿನ ಸಾಲು ಸಾಲು ರಜೆ 

​ಪ್ರಜಾವಾಣಿ ವಾರ್ತೆ
Published 2 ಏಪ್ರಿಲ್ 2019, 1:27 IST
Last Updated 2 ಏಪ್ರಿಲ್ 2019, 1:27 IST
   

ಬೆಂಗಳೂರು:ಏಪ್ರಿಲ್‌ ತಿಂಗಳಿನಲ್ಲಿ ಒಂದರ ಹಿಂದೊಂದು ರಜೆಗಳು ಬಂದಿರುವ ಕಾರಣ ಒಟ್ಟು 10 ದಿನ ಬ್ಯಾಂಕ್‌ ರಜೆ ಇರಲಿದೆ.

1) ಮಾರ್ಚ್‌ 31ರಂದು ಆರ್ಥಿಕ ವರ್ಷದ ಕೊನೆಯ ದಿನವಾಗಿದ್ದು, ಏಪ್ರಿಲ್‌ 1ರಂದು ಎಲ್ಲಾ ಬ್ಯಾಂಕ್‌ಗಳ ಶಾಖೆಗಳು ಮುಚ್ಚಿರಲಿವೆ.

2) ಏಪ್ರಿಲ್‌ 6ರಂದು ಯುಗಾದಿ ಹಬ್ಬದ ರಜೆ.

ADVERTISEMENT

3) ಏಪ್ರಿಲ್‌ 7ರಂದು ಭಾನುವಾರ.

4) ಏಪ್ರಿಲ್‌ 13ರಂದು ರಾಮ ನವಮಿ ಮತ್ತು 2ನೇ ಶನಿವಾರ ಬ್ಯಾಂಕ್ ರಜೆ.

5) ಏಪ್ರಿಲ್‌ 14ರಂದು ಭಾನುವಾರ, ಅಂಬೇಡ್ಕರ್‌ ಜಯಂತಿ ರಜೆ.

6) ಏಪ್ರಿಲ್‌ 17ರಂದು ಮಹಾವೀರ ಜಯಂತಿ ರಜೆ.

7) ಏಪ್ರಿಲ್‌ 19ರಂದು ಗುಡ್‌ ಫ್ರೈಡೇ ರಜೆ.

8) ಏಪ್ರಿಲ್‌ 21ರಂದು ಭಾನುವಾರ.

9) ಏಪ್ರಿಲ್‌ 27ರಂದು 4ನೇ ಶನಿವಾರ ಬ್ಯಾಂಕ್ ರಜೆ.

10) ಏಪ್ರಿಲ್‌ 28ರಂದು ಭಾನುವಾರ.

ಈ ಎಲ್ಲಾ ದಿನಗಳಲ್ಲಿ ಬ್ಯಾಂಕ್ ರಜೆ ಇರುವುದರಿಂದ ಅಗತ್ಯವಿರುವ ಹಣಕ್ಕಾಗಿ, ಬ್ಯಾಂಕ್‌ ವ್ಯವಹಾರಗಳಿಗೆ ಮುಂಚಿತವಾಗಿ ಪ್ಲಾನ್‌ ರೂಪಿಸಿಕೊಳ್ಳುವುದು ಉತ್ತಮ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.