ADVERTISEMENT

ಬೆಂಗಳೂರಿನಿಂದ ರಾಜಸ್ಥಾನಕ್ಕೆ ಟ್ರಕ್‌ನಲ್ಲಿ ಹೋಗುತ್ತಿದ್ದ 101 ಕಾರ್ಮಿಕರು ವಶಕ್ಕೆ

ಏಜೆನ್ಸೀಸ್
Published 12 ಮೇ 2020, 13:50 IST
Last Updated 12 ಮೇ 2020, 13:50 IST
ಕಾರ್ಮಿಕ- ಪ್ರಾತಿನಿಧಿಕ ಚಿತ್ರ (ಎಎಫ್‌ಪಿ)
ಕಾರ್ಮಿಕ- ಪ್ರಾತಿನಿಧಿಕ ಚಿತ್ರ (ಎಎಫ್‌ಪಿ)   

ಬೆಂಗಳೂರು: ಗೂಡ್ಸ್ ಟ್ರಕ್‌ನಲ್ಲಿ ಬೆಂಗಳೂರಿನಿಂದ ರಾಜಸ್ಥಾನದ ಕಡೆಗೆ ಪುಣೆ- ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಾಗಿ ಸಾಗುತ್ತಿದ್ದ ಸುಮಾರು 101 ಕಾರ್ಮಿಕರನ್ನು ಬೆಳಗಾವಿ ತಾಲೂಕಿನಹೀರೇಬಾಗೇವಾಡಿ ಗ್ರಾಮದ ಬಳಿಯಲ್ಲಿರುವ ಗಡಿಭಾಗದ ಚೆಕ್‌ಪೋಸ್ಟ್‌ನಲ್ಲಿ ವಶಕ್ಕೆ ತೆಗೆದುಕೊಳ್ಳಲಾಗಿದೆ. ಈ ಕಾರ್ಮಿಕರನ್ನು ಈಗ ಸಾಂಸ್ಥಿಕಕ್ವಾರಂಟೈನ್‌ನಲ್ಲಿರಿಸಲಾಗಿದೆ.

ಪುರುಷರು, ಮಹಿಳೆಯರು ಮತ್ತು ಮಕ್ಕಳು ಇರುವ ಕಾರ್ಮಿಕರ ತಂಡವು ಅನುಮತಿ ಇಲ್ಲದೆಯೇ ಗೂಡ್ಸ್ ಟ್ರಕ್‌ನಲ್ಲಿ ರಾಜಸ್ಥಾನದತ್ತ ಹೋಗುತ್ತಿತ್ತು. ಮಂಗಳವಾರ ಬೆಳಗ್ಗೆ ಹೀರೇಬಾಗೇವಾಡಿ ಚೆಕ್‌ಪೋಸ್ಟ್‌ನಲ್ಲಿ ಪೊಲೀಸರು ಮತ್ತು ಇತರ ಅಧಿಕಾರಿಗಳು ಇವರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಅವರನ್ನುದೈಹಿಕ ಶಿಕ್ಷಣ ಕಾಲೇಜಿನಕ್ರೀಡಾಂಗಣಕ್ಕೆ ತಂದು ವಿಚಾರಣೆ ನಡೆಸಿ ಆಮೇಲೆ ಬೆಳಗಾವಿ ನಗರದನೆಹರು ನಗರದಲ್ಲಿರುವ ಸಮಾಜ ಕಲ್ಯಾಣ ಇಲಾಖೆಯ ಹಾಸ್ಟೆಲ್‌ನಲ್ಲಿ ಸಾಂಸ್ಥಿಕಕ್ವಾರಂಟೈನ್‌ನಲ್ಲಿರಲು ಸೂಚಿಸಲಾಗಿದೆ.

ಈ ಪೈಕಿ ಒಬ್ಬ ಕಾರ್ಮಿಕನಿಗೆ ಜ್ವರ ಇರುವುದು ವೈದ್ಯಕೀಯ ತಪಾಸಣೆ ಮಾಡಿದಾಗ ತಿಳಿದುಬಂದಿದೆ. ಅವರನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಬೆಳಗಾವಿ ನಗರ ಪಾಲಿಕೆ ಆಯುಕ್ತ ಕೆ.ಎಚ್.ಜಗದೀಶ್ ಹೇಳಿದ್ದಾರೆ.

ADVERTISEMENT

ಏಪ್ರಿಲ್ ತಿಂಗಳಲ್ಲಿ 300ಕ್ಕಿಂತಲೂ ಹೆಚ್ಚು ಕಾರ್ಮಿಕರು ಎರಡು ಗೂಡ್ಸ್ ಟ್ರಕ್‌ಗಳಲ್ಲಿ ರಾಜಸ್ಥಾನಕ್ಕೆ ಹೋಗುತ್ತಿದ್ದಾಗ ಅವರನ್ನು ವಶಕ್ಕೆ ತೆಗೆದುಕೊಂಡು ಕ್ವಾರಂಟೈನ್ ಮಾಡಲಾಗಿತ್ತು. ಇದೀಗ 101 ಕಾರ್ಮಿಕರು ಬೆಂಗಳೂರಿನಿಂದ ಹೊರಗೆ ಹೋಗುತ್ತಿರುವ ಪ್ರಕರಣ ಪತ್ತೆಯಾದ ನಂತರ ನಗರದ ಚೆಕ್ ಪಾಯಿಂಟ್‌ಗಳಲ್ಲಿ ಸರಿಯಾಗಿ ತಪಾಸಣೆ ನಡೆಯುತ್ತಿಲ್ಲವೇ ಎಂಬ ಅನುಮಾನವನ್ನು ಹುಟ್ಟುಹಾಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.