ADVERTISEMENT

ವಾರ್ಷಿಕ ಶೇ 12ರಷ್ಟು ಬೋಧಕ ಸಿಬ್ಬಂದಿ ವರ್ಗಾವಣೆಗೆ ಅವಕಾಶ

​ಪ್ರಜಾವಾಣಿ ವಾರ್ತೆ
Published 28 ಅಕ್ಟೋಬರ್ 2020, 1:09 IST
Last Updated 28 ಅಕ್ಟೋಬರ್ 2020, 1:09 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ಬೆಂಗಳೂರು: ಪದವಿ ಮತ್ತು ತಾಂತ್ರಿಕ ಶಿಕ್ಷಣ ಸಂಸ್ಥೆಗಳಲ್ಲಿರುವ ಬೋಧಕರ ಪೈಕಿ ವಾರ್ಷಿಕ ಶೇ 12ರಷ್ಟು ಮಂದಿಯ ವರ್ಗಾವಣೆಗೆ ಅವಕಾಶ ಕಲ್ಪಿಸಿ ನಿಯಮಕ್ಕೆ ತಿದ್ದುಪಡಿ ತರಲಾಗಿದೆ‌.

ಈ ಉದ್ದೇಶಕ್ಕಾಗಿ ‘ಕರ್ನಾಟಕ ರಾಜ್ಯ ನಾಗರಿಕ ಸೇವೆಗಳು (ತಾಂತ್ರಿಕ ಶಿಕ್ಷಣ ಇಲಾಖೆಯ ಬೋಧಕ ಸಿಬ್ಬಂದಿ ವರ್ಗಾವಣೆ ನಿಯಂತ್ರಣ) ನಿಯಮಗಳು– 2020’ ಅನ್ನು ರಾಜ್ಯ ಸರ್ಕಾರ ಹೊರಡಿಸಿದೆ.

ತಿದ್ದುಪಡಿ ನಿಯಮದಲ್ಲಿ, ತುರ್ತು ವರ್ಗಾವಣೆಗೆ ಈ ಹಿಂದೆ ನಿಗದಿಪಡಿಸಲಾಗಿದ್ದ ನಾಲ್ಕು ವರ್ಷಗಳ ಕರ್ತವ್ಯ ಅವಧಿಯನ್ನು ಮೂರು ವರ್ಷಕ್ಕೆ ಇಳಿಸಲಾಗಿದೆ. ಸೇವಾ ಅವಧಿಯಲ್ಲಿ ಈ ತುರ್ತು ವರ್ಗಾವಣೆ ಕೇವಲ ಒಂದು ಬಾರಿ ಮಾತ್ರ ಪಡೆಯಲು ಅವಕಾಶವಿದೆ. ಅಲ್ಲದೆ, ನಿವೃತ್ತಿಗೆ ಎರಡು ವರ್ಷ ಬಾಕಿ ಇರುವವರಿಗೆ ವರ್ಗಾವಣೆಯಿಂದ ವಿನಾಯಿತಿ ನೀಡಲಾಗಿದೆ.

ADVERTISEMENT

ಈ ಹಿಂದಿನ ವರ್ಗಾವಣೆ ನಿಯಮದಲ್ಲಿ ವಲಯ ವಿಂಗಡಣೆ ಅಸಮರ್ಪಕವಾಗಿತ್ತು. ಬಿಬಿಎಂಪಿ ಮತ್ತು ಜಿಲ್ಲಾ ಕೇಂದ್ರಗಳಲ್ಲಿರುವ ಸರ್ಕಾರಿ ಎಂಜಿನಿಯರಿಂಗ್‌ ಕಾಲೇಜು ಮತ್ತು ಪಾಲಿಟೆಕ್ನಿಕ್‌ಗಳನ್ನು ಒಂದೇ ವಲಯದಲ್ಲಿ ಗುರುತಿಸಲಾಗಿತ್ತು. ಈ ಬಗ್ಗೆ ಸಿಬ್ಬಂದಿ ವರ್ಗದಿಂದ ದೂರುಗಳು ಬಂದಿದ್ದವು. ಅಲ್ಲದೆ, ತಾಂತ್ರಿಕ ಶಿಕ್ಷಣ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುವ ಪ್ರಾಂಶುಪಾಲರನ್ನು ಎಐಸಿಟಿಇ ಮಾರ್ಗಸೂಚಿ ಅನ್ವಯ ವರ್ಗಾಯಿಸಬೇಕಾಗಿತ್ತು. ಪತಿ–ಪತ್ನಿ, ಸರ್ಕಾರಿ, ಖಾಸಗಿ ಯೋಜನೆಗಳಲ್ಲಿ ಕರ್ತವ್ಯದಲ್ಲಿರುವವರು, ಎನ್‌ಸಿಸಿ ಅಧಿಕಾರಿ
ಗಳು, ಸಂಶೋಧನಾ ಗೈಡ್‌ಗಳು ಮತ್ತು 371(ಜೆ) ಪ್ರಕರಣಗಳಿಗೆ ವರ್ಗಾವಣೆಗೆ ಅವಕಾಶ ಇರಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.