ADVERTISEMENT

279 ಬೋಧಕೇತರ ಹುದ್ದೆ ರದ್ದು

​ಪ್ರಜಾವಾಣಿ ವಾರ್ತೆ
Published 15 ಫೆಬ್ರುವರಿ 2023, 18:42 IST
Last Updated 15 ಫೆಬ್ರುವರಿ 2023, 18:42 IST
   

ಬೆಂಗಳೂರು: ಬೋಧಕೇತರ 279 ಹುದ್ದೆಗಳನ್ನು ರದ್ದು ಮಾಡಿ, ಕರ್ನಾಟಕ ಪಬ್ಲಿಕ್‌ ಶಾಲೆಗಳಿಗೆ 58 ಉಪ ಪ್ರಾಂಶುಪಾಲರು, ಮುಖ್ಯ ಶಿಕ್ಷಕರ ಹುದ್ದೆಗಳನ್ನು ಮಂಜೂರು ಮಾಡಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಆದೇಶ ಹೊರಡಿಸಿದೆ.

ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯ ನಾಲ್ಕು, ಆಯುಕ್ತರ ಕಚೇರಿಯ ಐದು, ಡಯಟ್‌, ಪದವಿಪೂರ್ವ ಕಾಲೇಜುಗಳ ತಲಾ ಒಂದು ಹುದ್ದೆಗಳು ಸೇರಿ ಶೀಘ್ರ ಲಿಪಿಗಾರರು (50), ಹಿರಿಯ ಬೆರಳಚ್ಚುಗಾರರು (29), ದ್ವಿತೀಯ ದರ್ಜೆ ಸಹಾಯಕರು (100), ದತ್ತಾಂಶ ನಿರ್ವಹಣೆ ಸಿಬ್ಬಂದಿ (50) ಹಾಗೂ ಬೆರಳಚ್ಚುಗಾರರ (50) ಹುದ್ದೆಗಳು ರದ್ದಾಗಿವೆ. ರದ್ದಾದ ಹುದ್ದೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗೆ ಸಮೀಪದ ಸೂಕ್ತ ಸ್ಥಳ ಆಯ್ಕೆ ಮಾಡಿಕೊಳ್ಳಲು ಅವಕಾಶ ಕಲ್ಪಿಸಬೇಕು ಎಂದು ಆಯುಕ್ತ ಆರ್‌. ವಿಶಾಲ್‌ ಆದೇಶದಲ್ಲಿ
ವಿವರಿಸಿದ್ದಾರೆ.

ಕರ್ನಾಟಕ ಪಬ್ಲಿಕ್‌ ಶಾಲೆಗಳಲ್ಲಿ ಹೊಸದಾಗಿ 58 ಮುಖ್ಯ ಶಿಕ್ಷಕರು, ಉಪ ಪ್ರಾಂಶುಪಾಲರ ಹುದ್ದೆಗಳನ್ನು ಮಂಜೂರು ಮಾಡಲಾಗಿದೆ. 500ಕ್ಕೂ ಕಡಿಮೆ ವಿದ್ಯಾರ್ಥಿಗಳಿರುವ 35 ಶಾಲೆಗಳಿಗೆ ಇತರೆ ಶಾಲೆ, ಕಚೇರಿಗಳಲ್ಲಿನ ಮುಖ್ಯ ಶಿಕ್ಷಕರ ಹುದ್ದೆ ಸ್ಥಳಾಂತರಿಸುವಂತೆ ಸೂಚಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.