ADVERTISEMENT

ಕಾಂಪಾ ಅಡಿ ರಾಜ್ಯಕ್ಕೆ 363 ಕೋಟಿ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 12 ಜನವರಿ 2024, 14:55 IST
Last Updated 12 ಜನವರಿ 2024, 14:55 IST
<div class="paragraphs"><p>ಹಣ ಸಂಗ್ರಹ ಚಿತ್ರ</p></div>

ಹಣ ಸಂಗ್ರಹ ಚಿತ್ರ

   

ನವದೆಹಲಿ: ಪರಿಹಾರ ಅರಣ್ಯೀಕರಣ ನಿಧಿ (ಕಾಂಪಾ) ಅಡಿಯಲ್ಲಿ ರಾಜ್ಯದ ಸಂಚಿತ ನಿಧಿಯ ಪೈಕಿ ₹363 ಕೋಟಿ 44 ಲಕ್ಷ ರೂಪಾಯಿಗಳನ್ನು ಕೇಂದ್ರ ಸರ್ಕಾರ ರಾಜ್ಯಕ್ಕೆ ಬಿಡುಗಡೆ ಮಾಡಿದೆ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ತಿಳಿಸಿದ್ದಾರೆ.

ದೆಹಲಿಯಲ್ಲಿಂದು ಖಂಡ್ರೆ ಅವರು, ಕೇಂದ್ರ ಅರಣ್ಯ ಮತ್ತು ಪರಿಸರ ಸಚಿವ ಭೂಪೇಂದರ್ ಯಾದವ್ ಅವರನ್ನು ಭೇಟಿ ಮಾಡಿದ ಫಲವಾಗಿ 8.2.2019ರಿಂದ 31.2.2022ರ ನಡುವಿನ ಅವಧಿಯಲ್ಲಿ ಸಂಚಿತವಾದ ಕಾಂಪಾ ಹಣದ ಪೈಕಿ ಕೇಂದ್ರ ನಿಧಿಯ ಹಣ ಕಡಿತ ಮಾಡಿಕೊಂಡು ಉಳಿದ ಹಣ ಬಿಡುಗಡೆ ಮಾಡಲಾಗಿದೆ.

ADVERTISEMENT

ಪರಿಹಾರ ಅರಣ್ಯೀಕರಣಕ್ಕೆ ₹209 ಕೋಟಿ 21 ಲಕ್ಷ ಮತ್ತು ಪ್ರಸ್ತುತ ಅರಣ್ಯದ ಮೌಲ್ಯದ ಆಧಾರದಲ್ಲಿ ₹98 ಕೋಟಿ 36 ಲಕ್ಷ ರೂಪಾಯಿ ಮತ್ತು ಇತರ ವೆಚ್ಚಕ್ಕಾಗಿ ₹55 ಕೋಟಿ 86 ಲಕ್ಷ, ರೂಪಾಯಿಗಳೂ ಸೇರಿ ಒಟ್ಟು ₹363,44,38,649 ಕೋಟಿ ವರ್ಗಾವಣೆಗೆ ಅನುಮೋದನೆ ನೀಡಲಾಗಿದೆ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.