ADVERTISEMENT

₹4 ಕೋಟಿ ನಗದು, ಶರ್ಟ್‌ಗಳ ವಶ

​ಪ್ರಜಾವಾಣಿ ವಾರ್ತೆ
Published 13 ಏಪ್ರಿಲ್ 2018, 3:17 IST
Last Updated 13 ಏಪ್ರಿಲ್ 2018, 3:17 IST

ಬೆಳಗಾವಿ: ಸಂಕೇಶ್ವರದಲ್ಲಿ ದಾಖಲೆಗಳಿಲ್ಲದೆ ಆಟೊರಿಕ್ಷಾದಲ್ಲಿ ಸಾಗಿಸುತ್ತಿದ್ದ ₹4 ಕೋಟಿ ನಗದನ್ನು ತೆರಿಗೆ ಅಧಿಕಾರಿಗಳು ಹಾಗೂ ಚುನಾವಣಾ ಸಿಬ್ಬಂದಿ ಗುರುವಾರ ತಡರಾತ್ರಿ ವಶಪಡಿಸಿಕೊಂಡಿದ್ದಾರೆ.

ಇನ್ನೊಂದು ವಾಹನದಲ್ಲಿ ಸಾಗಿಸುತ್ತಿದ್ದ ₹70 ಸಾವಿರ ಮೌಲ್ಯದ ಶರ್ಟ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ವಾಹನಗಳು, ನಗದು ಹಾಗೂ ಸರಕುಗಳನ್ನು ಸಂಕೇಶ್ವರ ಠಾಣೆ ಪೊಲೀಸ್ ಠಾಣೆಗೆ ನೀಡಲಾಗಿದೆ ಎಂದು ಬೆಳಗಾವಿ ವಿಭಾಗದ ಸರಕು ಹಾಗೂ ಸೇವಾ ತೆರಿಗೆ (ಜಾರಿ) ಜಂಟಿ ಆಯುಕ್ತ ರವಿ ಜೆ.ಸ್ಯಾಂಕ್ಟಸ್ ತಿಳಿಸಿದ್ದಾರೆ.

ವಾಹನವೊಂದರಲ್ಲಿ ಸಾಗಿಸುತ್ತಿದ್ದ ₹ 250 ಕೆ.ಜಿ. ಬಾದಾಮಿಯನ್ನು ದಾಖಲೆಗಳು ಇಲ್ಲದೆ ಇರುವುದರಿಂದ ಜಪ್ತಿ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.