ADVERTISEMENT

5 ಭಾಷೆಗಳಲ್ಲಿ ವೆಬ್‌ಸೈಟ್‌ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2013, 19:59 IST
Last Updated 20 ಸೆಪ್ಟೆಂಬರ್ 2013, 19:59 IST

ಬೆಂಗಳೂರು: ವಿಶಿಷ್ಟ ಗುರುತಿನ ಚೀಟಿ ಪ್ರಾಧಿ­ಕಾರವು (ಯುಐಡಿಎಐ) ನಗರದಲ್ಲಿ ಶುಕ್ರವಾರ ಐದು ಭಾಷೆ­ಗಳಲ್ಲಿ ತನ್ನ ವೆಬ್‌ ಸೈಟ್‌ ಬಿಡುಗಡೆ ಮಾಡಿತು.

ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರ ವು ಆಧಾರ್‌ ಕಾರ್ಡ್‌ಗೆ ಸಂಬಂಧಿ ಸಿದಂತೆ ದೇಶದ ಬೇರೆ ಬೇರೆ ಭಾಷೆಯ ಜನರಿಗೆ ಹೆಚ್ಚು ಅನುಕೂಲ­ವಾಗುವಂತೆ ಮಾಡಲು ಐದು ಭಾಷೆಗಳಲ್ಲಿ ವೆಬ್‌ ಸೈಟ್‌ ಬಿಡುಗಡೆ ಮಾಡಿದೆ.

ಇದುವರೆಗೂ ಹಿಂದಿ ಮತ್ತು ಇಂಗ್ಲಿಷ್‌ ಭಾಷೆಗಳಲ್ಲಿ ಲಭ್ಯವಿದ್ದ ವೆಬ್‌ ಸೈಟ್‌ ಇಂದಿನಿಂದ ಬಂಗಾಳಿ, ಗುಜ ರಾತಿ, ಕನ್ನಡ, ಮರಾಠಿ ಮತ್ತು ತಮಿಳು ಭಾಷೆಗಳಲ್ಲಿ ಲಭ್ಯವಾಗಲಿದೆ. ಆಧಾರ್‌ ಕಾರ್ಡ್‌ ಬಗೆಗಿನ ಯಾವುದೇ  ಮಾಹಿತಿ ಯು ಇನ್ನು ಮುಂದೆ ಈ ಐದೂ ಭಾಷೆಗಳಲ್ಲಿಯೂ ಲಭ್ಯವಾಗಲಿದೆ.

ಪ್ರಾಧಿಕಾರದ ವೆಬ್‌ಸೈಟ್‌ www. uidai.gov.in  ಮೇಲೆ ಕ್ಲಿಕ್‌ ಮಾಡಿ ಮೇಲಿನ ಯಾವುದೇ ಐದು ಭಾಷೆ ಗಳಲ್ಲಿ ಒಂದು ಭಾಷೆಯನ್ನು ನಮೂ ದಿಸಿ ಕ್ಲಿಕ್‌ ಮಾಡಬೇಕು. ಆಗ ನಮೂ ದಿಸಿದ ಭಾಷೆಯಲ್ಲಿ ಆಧಾರ್‌ ಕಾರ್ಡ್‌ ಬಗೆಗಿನ ಮಾಹಿತಿ ಲಭ್ಯವಾಗುತ್ತದೆ. ಅಲ್ಲದೇ, ನೀವು ಆಧಾರ ಕಾರ್ಡ್‌ಗೆ ಮಾಹಿತಿ ಸಲ್ಲಿಸಿದ್ದಲ್ಲಿ ಅದು ಯಾವ ಹಂತದಲ್ಲಿದೆ ಎಂಬುದನ್ನು ಕೂಡ ಪರಿಶೀಲನೆ ಮಾಡಬಹುದಾಗಿದೆ.

ಪ್ರಾಧಿಕಾರವು ಈಗಾಗಲೇ 13 ಭಾಷೆಗಳಲ್ಲಿ 35 ಕೋಟಿ ಆಧಾರ ಕಾರ್ಡ್‌ಗಳನ್ನು ವಿತರಣೆ ಮಾಡಿದೆ. 2014 ರೊಳಗೆ ದೇಶದೆಲ್ಲೆಡೆಯ ನಾಗರಿಕರಿಗೆ 60 ಕೋಟಿ ಆಧಾರ್‌ ಕಾರ್ಡ್‌ಗಳನ್ನು ವಿತರಿಸುವ ಗುರಿ ಹೊಂದಿದೆ. ಪ್ರಾಧಿಕಾರದ ಅಧ್ಯಕ್ಷ ನಂದನ್‌ ನೀಲೇಕಣಿ ಅವರು ವೆಬ್‌ಸೈಟ್‌ಗೆ ಚಾಲನೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.