ADVERTISEMENT

ಗವಿಮಠ ಮಹಾರಥೋತ್ಸವ ಇಂದು

​ಪ್ರಜಾವಾಣಿ ವಾರ್ತೆ
Published 2 ಜನವರಿ 2018, 19:30 IST
Last Updated 2 ಜನವರಿ 2018, 19:30 IST

ಕೊಪ್ಪಳ: ನಗರದ ಸಂಸ್ಥಾನ ಗವಿಮಠದ ಗವಿಸಿದ್ದೇಶ್ವರ ಮಹಾರಥೋತ್ಸವ ಜ. 3ರಂದು ಸಂಜೆ 5 ಗಂಟೆಗೆ ನಡೆಯಲಿದೆ.

ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ ಅವರು ರಥೋತ್ಸವ ಉದ್ಘಾಟಿಸುವರು. ಸಂಜೆ 6ರಿಂದ ಕೈಲಾಸ ಮಂಟಪ ವೇದಿಕೆಯಲ್ಲಿ ಅನುಭಾವಿಗಳ ಅಮೃತ-ಚಿಂತನ ಗೋಷ್ಠಿ ಹಾಗೂ ಬಿ.ಜಯಶ್ರೀ ಅವರಿಂದ ಗಾನ ತರಂಗ ಕಾರ್ಯಕ್ರಮ ನಡೆಯಲಿವೆ.

ಜ. 4ರಂದು ಸಂಜೆ 5.30 ಗಂಟೆಗೆ ಕೈಲಾಸ ಮಂಟಪ ವೇದಿಕೆಯಲ್ಲಿ ಭಕ್ತ ಹಿತಚಿಂತನ ಸಭೆ ಜರುಗಲಿದೆ. ಆದಿಚುಂಚನಗಿರಿಯ ನಿರ್ಮಲಾನಂದನಾಥ ಸ್ವಾಮೀಜಿ, ಹುಬ್ಬಳ್ಳಿಯ ಚಿದ್ರೂಪಾನಂದ ಸರಸ್ವತಿ ಸ್ವಾಮೀಜಿ, ತುಮಕೂರು ಹಿರೇಮಠದ ಶಿವಾನಂದ ಶಿವಾಚಾರ್ಯ ಸ್ವಾಮೀಜಿ, ಬಿಜಕಲ್‌ನ ಶಿವಲಿಂಗ ಸ್ವಾಮೀಜಿ ಭಾಗವಹಿಸುವರು. ಕಲಾವಿದ ಜಯತೀರ್ಥ ಮೇವುಂಡಿ ಅವರಿಂದ ತಾನತರಂಗ ಕಾರ್ಯಕ್ರಮ ನಡೆಯಲಿದೆ.

ADVERTISEMENT

ಜ.5ರಂದು ನಡೆಯುವ ಸಮಾರೋಪ ಸಮಾರಂಭಕ್ಕೆ ಹುಬ್ಬಳ್ಳಿ ಮೂರುಸಾವಿರ ಮಠದ ಗುರುಸಿದ್ಧರಾಜಯೋಗೀಂದ್ರ ಸ್ವಾಮೀಜಿ, ಮಾನ್ವಿ ಕಲ್ಮಠದ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಸಾಹಿತಿ ದೊಡ್ಡರಂಗೇಗೌಡ ಅವರು ಸಮಾರೋಪ ಭಾಷಣ ಮಾಡುವರು. ಗಾಯಕ ರಾಜೇಶ್‌ ಕೃಷ್ಣನ್‌ ಅವರಿಂದ ಭಾವ - ತರಂಗ ಕಾರ್ಯಕ್ರಮ ಜರುಗುವುದು. ಜ. 6ರಿಂದ 8ರ ವರೆಗೆ ನಿತ್ಯ ಸಂಜೆ 6ರಿಂದ ಸಾಣೆಹಳ್ಳಿಯ ಶಿವಕುಮಾರ ಕಲಾ ತಂಡದವರಿಂದ ನಾಟಕಗಳು ಪ್ರದರ್ಶನಗೊಳ್ಳಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.