ADVERTISEMENT

ದೀಪಕ್ ಹತ್ಯೆ: ಎನ್ಐಎ ತನಿಖೆ ಆಗುವವರೆಗೆ ಹೋರಾಟ-ಸಿ.ಟಿ. ರವಿ

​ಪ್ರಜಾವಾಣಿ ವಾರ್ತೆ
Published 3 ಜನವರಿ 2018, 13:09 IST
Last Updated 3 ಜನವರಿ 2018, 13:09 IST
ದೀಪಕ್ ಹತ್ಯೆ: ಎನ್ಐಎ ತನಿಖೆ ಆಗುವವರೆಗೆ ಹೋರಾಟ-ಸಿ.ಟಿ. ರವಿ
ದೀಪಕ್ ಹತ್ಯೆ: ಎನ್ಐಎ ತನಿಖೆ ಆಗುವವರೆಗೆ ಹೋರಾಟ-ಸಿ.ಟಿ. ರವಿ   

ಮಂಗಳೂರು: ದೀಪಕ್ ರಾವ್ ಹತ್ಯೆ ಸೇರಿದಂತೆ ರಾಜ್ಯದಲ್ಲಿ ನಡೆದಿರುವ ಹಿಂದೂ ಕಾರ್ಯಕರ್ತರ ಹತ್ಯೆ ಪ್ರಕರಣಗಳ ತನಿಖೆಯನ್ನು ಎನ್ಐಎಗೆ ವಹಿಸಬೇಕು. ಅಲ್ಲಿಯವರೆಗೆ ರಾಜ್ಯವ್ಯಾಪಿ ಹೋರಾಟ ನಡೆಸಲಾಗುವುದು ಎಂದು ಬಿಜೆಪಿ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಹೇಳಿದರು.

ಕಾಂಗ್ರೆಸ್ ನ ತಾಲಿಬಾನಿ ನೀತಿಯಿಂದಾಗಿಯೇ ಹತ್ಯೆಗಳು ನಡೆಯುತ್ತಿವೆ. ರಮಾನಾಥ ರೈ ಅವರು ಅಲ್ಲಾಹುವಿನ ಕೃಪೆಯಿಂದಲೇ ಶಾಸಕರಾಗಿದ್ದಾರೆ. ಅದಕ್ಕಾಗಿಯೇ ಮುಸ್ಲಿಮರ ಒಲೈಕೆಯಲ್ಲಿ ತೊಡಗಿದ್ದಾರೆ.

ತಾಲಿಬಾನಿಗಳನ್ನು ಗುತ್ತಿಗೆ ಪಡೆದವರಂತೆ ವರ್ತಿಸುವ ಸಚಿವರು ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.