ಮಂಗಳೂರು: ಟಾರ್ಗೆಟ್ ಗುಂಪಿನ ಸದಸ್ಯನೊಂದಿಗೆ ಸಚಿವ ಖಾದರ್ ಅವರು ಜತೆಗೆ ಕುಳಿತು ಊಟ ಮಾಡುತ್ತಿರುವ ಫೋಟೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಇಲ್ಯಾಸ್ ಉಳ್ಳಾಲ್ ಟಾರ್ಗೆಟ್ ಗ್ರೂಪ್ ಸದಸ್ಯನಾಗಿದ್ದು, ಅನೇಕ ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದ ಎಂದು ತಿಳಿದುಬಂದಿದೆ. ಕುಖ್ಯಾತ ಅಪರಾಧ ಚಟುವಟಿಕೆಗಳಲ್ಲಿ ಈತನ ವಿರುದ್ಧ ಆರೋಪವಿದೆ. ಖಾದರ್ ಅವರು ಟಾರ್ಗೆಟ್ ಗ್ರೂಪ್ ಜತೆ ನಂಟು ಬೆಳೆಸಿಕೊಂಡಿದ್ದಾರೆ ಎನ್ನುವ ಆರೋಪ ಕೇಳಿ ಬರುತ್ತಿದೆ.
ಕಾಟಿಪಳ್ಳದಲ್ಲಿ ದೀಪಕ್ ರಾವ್ ಕೊಲೆ ಪ್ರಕರಣದ ಪ್ರಮುಖ ಆರೋಪಿ ಪಿಂಕಿ ನವಾಝ್ ಜತೆಗೆ ಇಲ್ಯಾಸ್‌ಗೆ ಸಖ್ಯ ಇದೆ ಎಂಬ ಕಾರಣಕ್ಕೆ ಈ ಸುದ್ದಿಗೆ ಮಹತ್ವ ದೊರೆತಿದೆ.
ಆದರೆ, ಈ ಬಗ್ಗೆ ಪ್ರತಿಕ್ರಿಯಿಸಿರುವ ಸಚಿವ ಖಾದರ್, ‘ಊಟ ಮಾಡುವ ಫೋಟೊ ಇಟ್ಟುಕೊಂಡು ರಾಜಕೀಯ ಮಾಡುತ್ತಿದ್ದಾರೆ. ಇಂತಹ ಆರೋಪಗಳಿಗೆ ನಾವೇನು ಮಾಡುವುದು? ಯುವ ಕಾಂಗ್ರೆಸ್ ಚುನಾವಣೆಯಲ್ಲಿ ಇಲ್ಯಾಸ್ ಸ್ಪರ್ಧಿಸಿದ್ದ. ಪಕ್ಕದಲ್ಲಿ ಬಂದು ಊಟಕ್ಕೆ ಕೂತರೆ ನಾನು ಏನು ಮಾಡಲು ಸಾಧ್ಯ? ಕೊಲೆಗೆ ನಾನು ಬೆಂಬಲ ಕೊಡಲ್ಲ’ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.