ADVERTISEMENT

ಸಫಾರಿ ನಿರ್ಬಂಧ ವಾಪಸ್‌

​ಪ್ರಜಾವಾಣಿ ವಾರ್ತೆ
Published 5 ಜನವರಿ 2018, 19:30 IST
Last Updated 5 ಜನವರಿ 2018, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಗುಂಡ್ಲುಪೇಟೆ: ಹುಲಿ ಗಣತಿ ಪ್ರಯುಕ್ತ ಜ.7ರಿಂದ 13ರ ವರೆಗೆ ಸಫಾರಿಯನ್ನು ನಿರ್ಬಂಧಿಸಿ ಹೊರಡಿಸಿದ್ದ ಆದೇಶವನ್ನು ಅರಣ್ಯ ಇಲಾಖೆ ಹಿಂದಕ್ಕೆ ಪಡೆದುಕೊಂಡಿದೆ.

ಬಂಡೀಪುರ ರಾಷ್ಟ್ರೀಯ ಉದ್ಯಾನ, ಬಿಆರ್‌ಟಿ ಸೇರಿದಂತೆ ವಿವಿಧೆಡೆ ಬೆಳಗಿನ ಸಫಾರಿ ಅವಧಿಯನ್ನು ಬದಲಿಸಿ ಅವಕಾಶ ನೀಡಲಾಗಿದೆ. ಸಫಾರಿ ಪ್ರದೇಶದಲ್ಲಿ ಬೆಳಗಿನ ಗಣತಿಕಾರ್ಯ ಪೂರ್ಣಗೊಂಡ ಬಳಿಕ 7.30ರಿಂದ ಸಫಾರಿ ನಡೆಸಬಹುದು.

ಸಫಾರಿ ನಿರ್ಬಂಧಕ್ಕೆ ಆಕ್ಷೇಪ ವ್ಯಕ್ತವಾಗಿತ್ತು. ಹೀಗಾಗಿ ಸಮಯ ಮಾರ್ಪಾಡಿನೊಂದಿಗೆ ಅವಕಾಶ ನೀಡಲಾಗಿದೆ ಎಂದು ವನ್ಯಜೀವಿ ವಿಭಾಗದ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಪುನಾಟಿ ಶ್ರೀಧರ್‌ ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.