ADVERTISEMENT

ಸಾಧನಾ ಸಮಾವೇಶಕ್ಕಾಗಿ ದುಂದು ವೆಚ್ಚ ಆರೋಪ: ದಾಖಲೆ ಒದಗಿಸುವಂತೆ ಹೈಕೋರ್ಟ್‌ ಸೂಚನೆ

​ಪ್ರಜಾವಾಣಿ ವಾರ್ತೆ
Published 8 ಜನವರಿ 2018, 11:23 IST
Last Updated 8 ಜನವರಿ 2018, 11:23 IST
ಸಾಧನಾ ಸಮಾವೇಶಕ್ಕಾಗಿ ದುಂದು ವೆಚ್ಚ ಆರೋಪ: ದಾಖಲೆ ಒದಗಿಸುವಂತೆ ಹೈಕೋರ್ಟ್‌ ಸೂಚನೆ
ಸಾಧನಾ ಸಮಾವೇಶಕ್ಕಾಗಿ ದುಂದು ವೆಚ್ಚ ಆರೋಪ: ದಾಖಲೆ ಒದಗಿಸುವಂತೆ ಹೈಕೋರ್ಟ್‌ ಸೂಚನೆ   

ಬೆಂಗಳೂರು: ಮುಖ್ಯಮಂತ್ರಿಗಳ ಸಿದ್ದರಾಮಯ್ಯ ಅವರು ಸರ್ಕಾರದ ವತಿಯಿಂದ ನಡೆಸುತ್ತಿರುವ ಸಾಧನಾ ಸಮಾವೇಶ ಹಾಗೂ ಪ್ರಚಾರಕ್ಕಾಗಿ ದುಂದು ವೆಚ್ಚ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ಹಂಗಾಮಿ ಮುಖ್ಯ ನ್ಯಾಯಮೂರ್ತಿ ಎಚ್.ಜಿ.ರಮೇಶ್ ನೇತೃತ್ವದ ಹೈಕೋರ್ಟ್ ವಿಭಾಗೀಯ ಪೀಠ ನಡೆಸಿತು.

‘ಪ್ರಜಾಪ್ರಭುತ್ವ ರಾಷ್ಟದಲ್ಲಿ ಜಾಹೀರಾತು ನೀಡುವುದು ಕಾನೂನು ಬದ್ಧವಾಗಿದೆ’ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿತು.

‘ಮುಖ್ಯಮಂತ್ರಿಗಳಿಗೆ ಭಾಷಣ ಮಾಡುವ ಸ್ವಾತಂತ್ರ್ಯವಿದೆ. ದುಂದು ವೆಚ್ಚದ ಕುರಿತು ದಾಖಲೆಗಳನ್ನು ಒದಗಿಸಿ’ ಎಂದು ಅರ್ಜಿದಾರರಿಗೆ ಸೂಚಿಸಿದ ನ್ಯಾಯಪೀಠ ವಿಚಾರಣೆ ಮುಂದೂಡಿದೆ.

ADVERTISEMENT

‘ಮುಖ್ಯಮಂತ್ರಿ ಹಾಗೂ ಸಂಪುಟದ ಇತರೆ ಸಚಿವರು ಸರ್ಕಾರಿ ಹಣವನ್ನು ದುಂದು ವೆಚ್ಚ ಮಾಡುತ್ತಿದ್ದಾರೆ. ಸಿ.ಎಂ ಭಾಷಣಗಳನ್ನು ಟ್ವಿಟ್ಟರ್ ಮತ್ತು ಫೇಸ್‌ಬುಕ್‌ ಗಳಲ್ಲಿ ಸರ್ಕಾರಿ ವೆಚ್ಚದಲ್ಲಿ ಪ್ರಚಾರ ಮಾಡಲಾಗುತ್ತಿದೆ’ ಎಂದು ಅರ್ಜಿದಾರರ ಆರೋಪಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.