ADVERTISEMENT

ದೀಪಕ್‌ ಕೊಲೆಗೆ ಮಹಿಳೆಯ ಕಾರು ಬಳಕೆ

ಪೊಲೀಸ್‌ ತನಿಖೆಯ ವೇಳೆ ಬಯಲಿಗೆ ಬಂದ ಅಂಶ

​ಪ್ರಜಾವಾಣಿ ವಾರ್ತೆ
Published 8 ಜನವರಿ 2018, 19:30 IST
Last Updated 8 ಜನವರಿ 2018, 19:30 IST

ಮಂಗಳೂರು: ಜನವರಿ 3ರಂದು ಕಾಟಿಪಳ್ಳದಲ್ಲಿ ದೀಪಕ್‌ ರಾವ್‌ ಕೊಲೆಗೆ ಆರೋಪಿಗಳು ಬಳಕೆ ಮಾಡಿರುವ ಕಾರು ಮುಕ್ಕ ನಿವಾಸಿಯಾಗಿರುವ ಮಹಿಳೆಯೊಬ್ಬರಿಗೆ ಸೇರಿದ್ದು ಎಂಬುದು ತನಿಖೆ ವೇಳೆ ಗೊತ್ತಾಗಿದೆ. ಈ ಕುರಿತು ಕಾರಿನ ಮಾಲಕಿಯನ್ನು ವಿಚಾರಣೆ ನಡೆಸಲು ತನಿಖಾ ತಂಡ ಮುಂದಾಗಿದೆ.

ದೀಪಕ್‌ ಕೊಲೆಗೆ ಪಿಂಕಿ ನವಾಝ್‌ ಮತ್ತು ಸಹಚರರು, ಕೆಎ– 19, ಎಂಡಿ– 5235 ನೋಂದಣಿ ಸಂಖ್ಯೆಯ ಬಿಳಿ ಬಣ್ಣದ ಮಾರುತಿ ಸ್ವಿಫ್ಟ್‌ ಕಾರನ್ನು ಬಳಕೆ ಮಾಡಿದ್ದರು. ಇದು ಮುಕ್ಕ ನಿವಾಸಿ ನಫೀಸಾ ಎಂಬುವವರ ಹೆಸರಿನಲ್ಲಿದೆ. ಸ್ವಂತ ಬಳಕೆಗೆ ಎಂಬುದಾಗಿ ಕಾರನ್ನು ನೋಂದಣಿ ಮಾಡಲಾಗಿತ್ತು.

‘ಕಾರಿನ ಮಾಲಕಿ ಅದನ್ನು ದಿನದ ಬಾಡಿಗೆ ಲೆಕ್ಕದಲ್ಲಿ ನೀಡುತ್ತಿದ್ದರು ಎಂಬ ಮಾಹಿತಿ ಪ್ರಾಥಮಿಕ ತನಿಖೆ ವೇಳೆ ಲಭ್ಯವಾಗಿದೆ. ಆರೋಪಿಗಳಲ್ಲಿ ಆಕೆಯನ್ನು ಸಂಪರ್ಕಿಸಿದವರು ಯಾರು ಮತ್ತು ಎಷ್ಟು ದಿನಗಳ ಕಾಲ ಈ ಕಾರನ್ನು ಬಳಕೆ ಮಾಡಲಾಗಿದೆ ಎಂಬುದರ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಕಾರು ನೀಡಿದವರಿಗೆ ಕೊಲೆಯ ಸಂಚಿನ ಅರಿವಿತ್ತೇ? ಅವರೂ ಕೃತ್ಯದಲ್ಲಿ ಭಾಗಿಯಾಗಿದ್ದರೇ? ಎಂಬುದರ ಬಗ್ಗೆಯೂ ತನಿಖೆ ಮುಂದುವರಿದಿದೆ’ ಎಂದು ಮೂಲಗಳು ತಿಳಿಸಿವೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.