ADVERTISEMENT

ಕಾರ್ನಾಡರ ಮೂರನೇ ಪುಪ್ಪುಸ!

​ಪ್ರಜಾವಾಣಿ ವಾರ್ತೆ
Published 19 ಜನವರಿ 2018, 19:38 IST
Last Updated 19 ಜನವರಿ 2018, 19:38 IST
ಸಭಾಂಗಣದ ಹೊರಭಾಗದಲ್ಲಿ ಆಮ್ಲಜನಕ ಯಂತ್ರವನ್ನು ಚಾರ್ಜ್ ಮಾಡುತ್ತಾ ಕುಳಿತಿದ್ದ ಗಿರೀಶ ಕಾರ್ನಾಡ ಅವರಿಗೆ ಹಸ್ತಲಾಘವ ಮಾಡಿದ ರಾಮಚಂದ್ರ ಗುಹಾ. ಗಿರಡ್ಡಿ ಗೋವಿಂದರಾಜ ಇದ್ದಾರೆ
ಸಭಾಂಗಣದ ಹೊರಭಾಗದಲ್ಲಿ ಆಮ್ಲಜನಕ ಯಂತ್ರವನ್ನು ಚಾರ್ಜ್ ಮಾಡುತ್ತಾ ಕುಳಿತಿದ್ದ ಗಿರೀಶ ಕಾರ್ನಾಡ ಅವರಿಗೆ ಹಸ್ತಲಾಘವ ಮಾಡಿದ ರಾಮಚಂದ್ರ ಗುಹಾ. ಗಿರಡ್ಡಿ ಗೋವಿಂದರಾಜ ಇದ್ದಾರೆ   

ಧಾರವಾಡ: ಗಿರೀಶ ಕಾರ್ನಾಡರು ಮೂಗಿಗೆ ಅಳವಡಿಸಿಕೊಂಡಿರುವ ಆಮ್ಲಜನಕದ ಸಾಧನ ‘ಸಾಹಿತ್ಯ ಸಂಭ್ರಮ’ದಲ್ಲಿ ಸಹೃದಯರ ಕುತೂಹಲಕ್ಕೆ ಪಾತ್ರವಾಗಿತ್ತು.

ನರಹಳ್ಳಿ ಬಾಲಸುಬ್ರಹ್ಮಣ್ಯ ಅವರು ತಮ್ಮ ಭಾಷಣದಲ್ಲಿ ಮನುಷ್ಯನ ದುರಾಸೆಯಿಂದ ಪ್ರಕೃತಿ ಕಲುಷಿತಗೊಳ್ಳುತ್ತಿದ್ದು, ಅದು ನಮ್ಮ ಆರೋಗ್ಯದ ಮೇಲೆ ಬೀರುತ್ತಿರುವ ಪರಿಣಾಮಕ್ಕೆ ಉದಾಹರಣೆ ಇಲ್ಲೇ ಇದ್ದಾರೆ ಎಂದು ಕಾರ್ನಾಡರನ್ನು ತೋರಿಸಿದರು. ’ಅದಕ್ಕೂ ಇದಕ್ಕೂ ಸಂಬಂಧವೇ ಇಲ್ಲ’ ಎಂದು ಕಾರ್ನಾಡರು ನರಹಳ್ಳಿಯವರ ಮಾತನ್ನು ತಕ್ಷಣವೇ ತಿದ್ದಿದರು.

ಆದಿಲಶಾಹಿ ಸಾಹಿತ್ಯ ಕುರಿತ ಗೋಷ್ಠಿಯ ಆರಂಭದಲ್ಲಿ ಕಾರ್ನಾಡರು ತಮ್ಮ ಆರೋಗ್ಯದ ಕುರಿತು ಸ್ಪಷ್ಟನೆ ನೀಡಿದರು. ’ನನ್ನ ಎರಡು ಪುಪ್ಪುಸಗಳು ಅಗತ್ಯವಿದ್ದಷ್ಟು ಆಮ್ಲಜನಕ ಪೂರೈಸುತ್ತಿಲ್ಲ. ಹಾಗಾಗಿ ಯಂತ್ರದ ರೂಪದಲ್ಲಿ ಮೂರನೇ ಪುಪ್ಪುಸವನ್ನು ಕಟ್ಟಿಕೊಂಡು ಓಡಾಡಬೇಕಿದೆ’ ಎಂದರು.

ADVERTISEMENT

’ನಾನೇನು ನಾಚಿಕೊಳ್ಳುವಂತಹ ಕೆಲಸ ಮಾಡಿಲ್ಲ. ಹಾಗಾಗಿ ಇದನ್ನು ಬಚ್ಚಿಡೋದು ಅಡಗಿಸಿಡೋದು ಅಗತ್ಯವಿಲ್ಲ’ ಎಂದರು. ನಾನಿಲ್ಲಿಗೆ ಬರಲಿಕ್ಕೆ ಸಾಧ್ಯವಾದುದೇ ಇದರ ಸಹಾಯದಿಂದಾಗಿ. ವೈದ್ಯಕೀಯ ಸವಲತ್ತಿನ ಸಂಗತಿ ಎಲ್ಲರಿಗೂ ತಿಳಿಯಲಿ ಎನ್ನುವ ಕಾರಣಕ್ಕಾಗಿ ಈ ವಿಷಯ ಹೇಳುತ್ತಿರುವೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.