ADVERTISEMENT

ನಾಳೆ ‘ಶ್ರೀಬಾಹುಬಲಿ ಅಹಿಂಸಾದಿಗ್ವಿಜಯಂ’ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 22 ಜನವರಿ 2018, 19:36 IST
Last Updated 22 ಜನವರಿ 2018, 19:36 IST

ಬೆಂಗಳೂರು: ಸಂಸದ ಎಂ.ವೀರಪ್ಪ ಮೊಯಿಲಿ ರಚಿತ ‘ಶ್ರೀಬಾಹುಬಲಿ ಅಹಿಂಸಾದಿಗ್ವಿಜಯಂ’ ಮಹಾಕಾವ್ಯ ಇದೇ 24ರಂದು ಶ್ರವಣಬೆಳಗೊಳದಲ್ಲಿ ಬಿಡುಗಡೆಯಾಗಲಿದೆ.

ಕ್ಷೇತ್ರದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಸಾನ್ನಿಧ್ಯದಲ್ಲಿ ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರು ಅಂದು ಬೆಳಿಗ್ಗೆ 10.30ಕ್ಕೆ ಕೃತಿ ಬಿಡುಗಡೆ ಮಾಡಲಿದ್ದಾರೆ ಎಂದು ವೀರಪ್ಪ ಮೊಯಿಲಿ ಸೋಮವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಬಾಹುಬಲಿ ಬಗ್ಗೆ ಮಹಾಕಾವ್ಯ ಬರೆಯುವಂತೆ ಚಾರುಕೀರ್ತಿ ಭಟ್ಟಾರಕರು ಸಲಹೆ ನೀಡಿದ್ದರು. ಮಹಾಮಸ್ತಕಾಭಿಷೇಕದ ವೇಳೆಗೆ ಬಿಡುಗಡೆಗೆ ಸಿದ್ಧಪಡಿಸುವಂತೆಯೂ ಗಡುವು ನೀಡಿದ್ದರು. ಇದು ನನ್ನಿಂದ ಆಗುವುದಿಲ್ಲವೆಂದು ಆರಂಭದಲ್ಲಿ ಒಪ್ಪಿಕೊಳ್ಳಲು ಅಳುಕಿದ್ದೆ. ಸ್ವಾಮೀಜಿಯವರ ಒತ್ತಾಸೆಗೆ ಮಣಿದು 2014ರಲ್ಲಿ ಮಹಾಕಾವ್ಯ ರಚನೆ ಆರಂಭಿಸಿದೆ. ಮೂರು ತಿಂಗಳ ಹಿಂದೆ ಪೂರ್ಣಗೊಳಿಸಿದ್ದೇನೆ’ ಎಂದು ತಿಳಿಸಿದರು.

ADVERTISEMENT

ಬಿಡುಗಡೆ ಸಮಾರಂಭದಲ್ಲಿ ಕೃತಿ ರಿಯಾಯಿತಿ ದರ ₹500ಕ್ಕೆ ಲಭ್ಯವಿರಲಿದೆ ಎಂದು ಡಾ. ಕೆ.ಆರ್.ಕಮಲೇಶ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.