ADVERTISEMENT

ಚಂದನ್‌ ಶೆಟ್ಟಿಗೆ ‘ಬಿಗ್‌ಬಾಸ್‌ ಪಟ್ಟ’

​ಪ್ರಜಾವಾಣಿ ವಾರ್ತೆ
Published 29 ಜನವರಿ 2018, 3:31 IST
Last Updated 29 ಜನವರಿ 2018, 3:31 IST
ಚಂದನ್‌ ಶೆಟ್ಟಿಗೆ ‘ಬಿಗ್‌ಬಾಸ್‌ ಪಟ್ಟ’
ಚಂದನ್‌ ಶೆಟ್ಟಿಗೆ ‘ಬಿಗ್‌ಬಾಸ್‌ ಪಟ್ಟ’   

ಬೆಂಗಳೂರು: ಕನ್ನಡ ಬಿಗ್‌ ಬಾಸ್‌ನ ಐದನೇ ಆವೃತ್ತಿಯಲ್ಲಿ ಹಾಡುಗಾರ ಚಂದನ್‌ ಶೆಟ್ಟಿ ವಿಜೇತರಾಗಿ ಹೊರಹೊಮ್ಮಿದ್ದಾರೆ. ದೀವಾಕರ್ (ಸೆಲ್ಸ್‌ಮನ್‌ ) ಎರಡನೇ ಸ್ಥಾನ ಪಡೆದಿದ್ದಾರೆ.

ಈ ಬಾರಿ 11 ಸೆಲೆಬ್ರಿಟಿಗಳು ಹಾಗೂ 6 ಮಂದಿ ಜನಸಾಮಾನ್ಯರು ಸೇರಿ ಒಟ್ಟು 17 ಜನರು ಬಿಗ್‌ಬಾಸ್‌ ಮನೆಯೊಳಗೆ ಪ್ರವೇಶ ಪಡೆದಿದ್ದರು.

ಬಿಗ್‌ಬಾಸ್‌ ಮನೆಯೊಳಗೆ ಪ್ರವೇಶ ಪಡೆದವರು:  ಜಯ ಶ್ರೀನಿವಾಸನ್‌ (ಸಂಖ್ಯಾ ಜ್ಯೋತಿಷಿ), ಮೇಘಾ, ದಯಾಳ್ ಪದ್ಮನಾಭ (ನಿರ್ದೇಶಕ) ಸಿಹಿ ಕಹಿ ಚಂದ್ರು (ಹಿರಿಯ ನಟ), ಶ್ರುತಿ, ಅನುಪಮಾ ಗೌಡ (ನಟಿ),  ರಿಯಾಜ್‌ ಭಾಷಾ, ನಿವೇದಿತಾ ಗೌಡ, ಸಮೀರ್ ಆಚಾರ್ಯ (ಜ್ಯೋತಿಷಿ), ಕಾರ್ತಿಕ್ ಜಯರಾಮ್‌ (ನಟ), ಆಶಿತಾ ಚಂದ್ರಪ್ಪ, ದೀವಾಕರ್ (ಸೆಲ್ಸ್‌ಮನ್‌ ),  ತೇಜಸ್ವಿನಿ ಪ್ರಕಾಶ್‌ (ನಟಿ), ಚಂದನ್‌ ಶೆಟ್ಟಿ (ಹಾಡುಗಾರ), ಸುಮಾ (ಮ್ಯಾಜಿಸಿಯನ್‌),  ಕೃಷಿ,  ಜಗನ್‌ (ನಟ).

ADVERTISEMENT

ಹೊಸ ಗೆಟಪ್‌ನಲ್ಲಿ ಕಾಣಿಸಿಕೊಂಡಿರುವ ಕಿಚ್ಚ ಸುದೀಪ್‌ ಎಲ್ಲ ಸ್ಪರ್ಧಿಗಳಿಗೆ ಶುಭ ಕೋರಿದ್ದಾರೆ. ಕಲರ್ಸ್‌ ಸೂಪರ್‌ ವಾಹಿನಿಯಲ್ಲಿ ಪ್ರತಿ ರಾತ್ರಿ 8 ಗಂಟೆಗೆ ಬಿಗ್‌ ಬಾಸ್‌ ಕಾರ್ಯಕ್ರಮ ಪ್ರಸಾರವಾಗಿತ್ತು. 

</p></p>

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.