ADVERTISEMENT

ಜ.31ಕ್ಕೆ ಕಣಕುಂಬಿಯಲ್ಲಿ ಗ್ರಾಮ ವಾಸ್ತವ್ಯ ‌‌‌‌

​ಪ್ರಜಾವಾಣಿ ವಾರ್ತೆ
Published 29 ಜನವರಿ 2018, 7:21 IST
Last Updated 29 ಜನವರಿ 2018, 7:21 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಧಾರವಾಡ: ಮಹದಾಯಿ, ಕಳಸಾ-ಬಂಡೂರಿ ಉಗಮ ಸ್ಥಾನಕ್ಕೆ ಗೋವಾ ತಂಡ ಭೇಟಿ ನೀಡಿರುವುದನ್ನು ಖಂಡಿಸಿ ಜ.31ರಂದು ಜೆಡಿಎಸ್ ವತಿಯಿಂದ ಕಣಕುಂಬಿಯ ಮಾವಲಿ ದೇವಸ್ಥಾನದ ಎದುರು ಗ್ರಾಮ ವಾಸ್ತವ್ಯ ಮಾಡಲಾಗುವುದು ಎ‍ಂದು ನವಲಗುಂದ ಶಾಸಕ ಎನ್.ಎಚ್‌.ಕೋನರೆಡ್ಡಿ ಹೇಳಿದರು.

ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರಕಾರದ ಗಮನ ಸೆಳೆಯಲು‌ ಗ್ರಾಮ ವಾಸ್ತವ್ಯ ಮಾಡುತ್ತಿದ್ದೇನೆ. ಈಗಲಾದರೂ ಎಚ್ಚೆತ್ತು ರಾಜ್ಯ ಬಿಜೆಪಿ ನಾಯಕರು ಕೂಡಲೇ ಕೇಂದ್ರಕ್ಕೆ ದೂರು ನೀಡಿ ಪದೇ ಪದೇ ಇಂತಹ ಭೇಟಿಗೆ ಕಡಿವಾಣ ಹಾಕಬೇಕು. ಪ್ರಧಾನಿ‌ ಮೋದಿ ಅವರು ಫೆ.6ರೊಳಗೆ ಗಮನ ಹರಿಸಿ ಈ ವಿವಾದ ಬಗೆಹರಿಸಬೇಕು.

ಇಲ್ಲವಾದರೆ ಬೀದಿಗಿಳಿದು ಮಾಡು ಇಲ್ಲವೇ ಮಡಿ‌ ಹೋರಾಟ ಅನಿವಾರ್ಯ ಆಗಲಿದೆ ಎಂದು ಎಚ್ಚರಿಸಿದರು. ನವಲಗುಂದ‌ ನಗರದ ಧ್ಯಾವಮ್ಮನ ಗುಡಿಯ ಬಳಿ ಇರುವ ನಮ್ಮ‌ ಮನೆಯ‌ ನಿವಾಸದಲ್ಲಿ ಜ.31ರಂದು ಬೆಳಿಗ್ಗೆ ಪಕ್ಷದ ಮುಖಂಡರ ಹಾಗೂ ಕಾರ್ಯಕರ್ತರ ಸಭೆ ಕೈಗೊಂಡ ಬಳಿಕ‌ ಅಲ್ಲಿಂದ ನವಲಗುಂದದಿಂದ ಕಣಕುಂಬಿಗೆ ತೆರಳಿ, ಗ್ರಾಮ ವಾಸ್ತವ್ಯ ಮಾಡಲಾಗುವುದು ಎಂದು ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.