ADVERTISEMENT

ಬಿ.ಸಿ.ಪಾಟೀಲ ಯಾರು?

​ಪ್ರಜಾವಾಣಿ ವಾರ್ತೆ
Published 30 ಜನವರಿ 2018, 19:30 IST
Last Updated 30 ಜನವರಿ 2018, 19:30 IST

ಹುಬ್ಬಳ್ಳಿ: ‘ಬಿ.ಸಿ.ಪಾಟೀಲ ಯಾರು? ಅವರು, ಬೇರೆ, ಬೇರೆ ಪಕ್ಷ ಸುತ್ತಿ ಬಂದಿದ್ದಾರೆ. ಹಾವೇರಿ ಜಿಲ್ಲೆಯವರಲ್ಲ. ನಾನು ಹಾವೇರಿ ಜಿಲ್ಲೆಯವಳು. ಪಾಟೀಲರು ಬೇಕಾದರೆ ಬೇರೆ ಕಡೆ ಕ್ಷೇತ್ರ ಹುಡುಕಿಕೊಳ್ಳಲಿ’ ಎಂದು ಕರ್ನಾಟಕ ರಾಜ್ಯ ಸಾಂಬಾರು ಪದಾರ್ಥಗಳ ಅಭಿವೃದ್ಧಿ ಮಂಡಳಿ ಅಧ್ಯಕ್ಷೆ ಶಶಿಕಲಾ ಕವಲಿ ಹೇಳಿದರು.

‘ಹಾವೇರಿ ಜಿಲ್ಲೆಯ ಹಿರೇಕೆರೂರು ವಿಧಾನಸಭಾ ಕ್ಷೇತ್ರಕ್ಕೆ ನಾನು ಆಕಾಂಕ್ಷಿಯಾಗಿದ್ದೇನೆ. ಇಂದಿರಾಗಾಂಧಿ ಇದ್ದಾಗ ಕಾಂಗ್ರೆಸ್‌ ಸೇರಿದ್ದೇನೆ. ಪಕ್ಷದಲ್ಲಿ ವಿವಿಧ ಹುದ್ದೆ ನಿರ್ವಹಿಸಿದ್ದೇನೆ. ನಾನೇ ಹೈಕಮಾಂಡ್‌ ಅಭ್ಯರ್ಥಿ’ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

‘ಪಾಟೀಲರು ಶಿವಮೊಗ್ಗ ಜಿಲ್ಲೆಯ ಸೊರಬ ತಾಲ್ಲೂಕಿನವರು. ಹಾಗಾಗಿ ಅವರೇ ಬೇರೆ ಕಡೆಯಿಂದ ಸ್ಪರ್ಧಿಸಲಿ’ ಎಂದರು.

ADVERTISEMENT

‘ನಾನು ತತ್ವ ಅಂದಿದ್ದಕ್ಕೆ ಇಲ್ಲಿದ್ದೇನೆ. ನನ್ನ ಜೊತೆಗಿದ್ದ ಸಚಿವರಾದ ಡಿ.ಕೆ. ಶಿವಕುಮಾರ್, ಕೆ.ಜೆ.ಜಾರ್ಜ್, ವಿಧಾನ ಪರಿಷತ್‌ ಸದಸ್ಯೆ ಮೋಟಮ್ಮ ಅಲ್ಲಿದ್ದಾರೆ’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.