ADVERTISEMENT

ಶಾಸ್ತ್ರಿಗೂ, ಮೋದಿಗೂ ಹೋಲಿಕೆ ಸಲ್ಲಖ ದೇವನೂರ ಮಹಾದೇವ ಪ್ರತಿಪಾದನೆ

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2018, 19:30 IST
Last Updated 3 ಫೆಬ್ರುವರಿ 2018, 19:30 IST
ಶಾಸ್ತ್ರಿಗೂ, ಮೋದಿಗೂ ಹೋಲಿಕೆ ಸಲ್ಲಖ ದೇವನೂರ ಮಹಾದೇವ ಪ್ರತಿಪಾದನೆ
ಶಾಸ್ತ್ರಿಗೂ, ಮೋದಿಗೂ ಹೋಲಿಕೆ ಸಲ್ಲಖ ದೇವನೂರ ಮಹಾದೇವ ಪ್ರತಿಪಾದನೆ   

ಮೂಡುಬಿದಿರೆ: ಇಂದು ಸಾಮಾಜಿಕ ಜಾಲತಾಣಗಳಲ್ಲಿ ನರೇಂದ್ರ ಮೋದಿ ಅವರನ್ನು ಲಾಲ್ ಬಹುದ್ದೂರ್ ಶಾಸ್ತ್ರಿ ಅವರಿಗೆ ಹೋಲಿಕೆ ಮಾಡಲಾಗುತ್ತಿದೆ. ಮೋದಿಯಂತೆ ಶಾಸ್ತ್ರಿಯವರ ಹಿಂದು ಮುಂದು ಅಂಬಾನಿ ಸಹೋದರರು, ಅದಾನಿ ಮಹಾಶಯರು ಕಾಣಸಿಗುವುದಿಲ್ಲ ಎಂದು ಸಾಹಿತಿ ದೇವನೂರ ಮಹಾದೇವ ಹೇಳಿದರು.

‘ಬ್ಯಾಂಕ್‌ಗಳಿಗೆ ಕೋಟಿಗಟ್ಟಲೆ ಸಾಲ ಬಾಕಿ ಇರಿಸಿದ ಕುಳಗಳು ಈ ಉದ್ಯಮಿಗಳು ಮೋದಿಯನ್ನು ಶಾಸ್ತ್ರಿ ಜತೆ ಹೋಲಿಕೆ ಮಾಡುವ ಹೇಳಿಕೆಗಳೇ ಅಸಂಬದ್ಧ’ ಎಂದು ಅವರು ಶನಿವಾರ ಇಲ್ಲಿ ಶಿವರಾಮ ಕಾರಂತ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು.

‘ವರ್ಷಕ್ಕೆ ಒಂದು ಕೋಟಿ ಉದ್ಯೋಗ ಸೃಷ್ಟಿಸುತ್ತೇನೆ ಎಂದು ಜನತೆಗೆ ವಚನ ಕೊಟ್ಟ ಪ್ರಧಾನಿ ಮೋದಿ ಕೊಟ್ಟ ಮಾತಿಗೆ ತಪ್ಪಿದ್ದಾರೆ. ಅವರು ಮಾತು ಕೊಟ್ಟಾಗ ಇದ್ದಷ್ಟು ಉದ್ಯೋಗವೂ ಈಗ ಉಳಿದಿಲ್ಲ ಎಂಬುದು ಅಂಕಿ ಅಂಶ ಹೇಳುತ್ತದೆ, ಇದು ದ್ರೋಹವಲ್ಲವೆ’ ಎಂದು ಪ್ರಶ್ನಿಸಿದ ಅವರು, ‘ನಿರುದ್ಯೋಗ ಸಮಸ್ಯೆಯಿಂದಾಗಿ ಯುವಕರು ದಾರಿ ತಪ್ಪಿ ಮಚ್ಚು, ಬಂದೂಕು ಹಿಡಿದು ಹಿಂಸಾತ್ಮಕ ದಾರಿ ತುಳಿಯುತ್ತಿದ್ದಾರೆ. ಇದಕ್ಕೆಲ್ಲಾ ಆಳುವವರ ಕೃಪೆ ಇರಬಹುದೇನೊ ಎಂಬ ಅನುಮಾನ ಕಾಡುತ್ತಿದೆ’ ಎಂದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.