ADVERTISEMENT

ವಿಕ್ಟೋರಿಯಾ ರಾಣಿ ಭಾವಚಿತ್ರ ಇರುವ 140 ಬೆಳ್ಳಿನಾಣ್ಯ ಪತ್ತೆ

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2018, 18:52 IST
Last Updated 10 ಫೆಬ್ರುವರಿ 2018, 18:52 IST
ಬೆಳ್ಳಿ ನಾಣ್ಯ ಪರಿಶೀಲಿಸುತ್ತಿರುವ ಪೊಲೀಸರು
ಬೆಳ್ಳಿ ನಾಣ್ಯ ಪರಿಶೀಲಿಸುತ್ತಿರುವ ಪೊಲೀಸರು   

ಪಿರಿಯಾಪಟ್ಟಣ: ಬೆಟ್ಟದಪುರ ಸಮೀಪದ ಹರೀನಹಳ್ಳಿ ಗ್ರಾಮದಲ್ಲಿ ಮನೆ ನಿರ್ಮಾಣಕ್ಕೆ ತಳಪಾಯ ತೆಗೆಯುವಾಗ ಮಡಿಕೆಯಲ್ಲಿ ಕ್ರಿ.ಶ 1840ರ ವಿಕ್ಟೋರಿಯಾ ರಾಣಿ ಭಾವಚಿತ್ರವಿರುವ 140 ಬೆಳ್ಳಿನಾಣ್ಯಗಳು ಪತ್ತೆಯಾಗಿವೆ.

ನಾಣ್ಯಗಳನ್ನು ಕಾರ್ಮಿಕರು ಮನೆಗೆ ತೆಗೆದುಕೊಂಡು ಹೋಗಿದ್ದರು. ಖಚಿತ ಮಾಹಿತಿ ಮೇರೆಗೆ ಪಿರಿಯಾಪಟ್ಟಣ ಠಾಣೆ ಸಿಪಿಐ ಸಿದ್ದಯ್ಯ, ಬೆಟ್ಟದಪುರ ಠಾಣೆ ಪಿಎಸ್ಐ ಚಿಕ್ಕಸ್ವಾಮಿ ಗ್ರಾಮಕ್ಕೆ ತೆರಳಿ ವಶಪಡಿಸಿಕೊಂಡಿದ್ದಾರೆ. ನಾಣ್ಯಗಳು ಸಿಕ್ಕ ಜಾಗ ನೋಡಲು ಸುತ್ತಮುತ್ತಲಿನ ಗ್ರಾಮಗಳ ಜನರು ಬರುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT