
ಪ್ರಜಾವಾಣಿ ವಾರ್ತೆಶ್ರವಣಬೆಳಗೊಳ: ಮಸ್ತಕಾಭಿಷೇಕದಲ್ಲಿ ಸೋಮವಾರ ಪ್ರಧಾನಿ ಪಾಲ್ಗೊಂಡ ಸಮಾರಂಭದಲ್ಲಿ ಸ್ವಾಗತ ಭಾಷಣ ಮಾಡಿದ ಸಚಿವ ಎ.ಮಂಜು ಕಾರ್ಯಕ್ರಮಕ್ಕೆ ಬಾರದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಜೆಡಿಎಸ್ ಅಧ್ಯಕ್ಷ ಎಚ್.ಡಿ. ದೇವೇಗೌಡ ಅವರನ್ನೂ ಸ್ವಾಗತಿಸಿದರು!
‘ಉತ್ಸವದ ತಯಾರಿಗೆ ₹ 250 ಕೋಟಿ ಅನುದಾನ ನೀಡಿದ ನಮ್ಮ ನೆಚ್ಚಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಆದರದ ಸ್ವಾಗತ’ ಎಂದು ಸಚಿವರು ಹೇಳಿದರು. ಆಗ ‘ಮುಖ್ಯಮಂತ್ರಿ ಎಲ್ಲಿದ್ದಾರೆ’ ಎಂದು ಸಭಿಕರು ಅವಾಕ್ಕಾಗಿ ನೋಡಿದರು. ಸಭೆಯಲ್ಲಿ ಇಲ್ಲದಿದ್ದ ದೇವೇಗೌಡರನ್ನೂ ಸ್ವಾಗತಿಸಿದ ಸಚಿವರು ಎಲ್ಲರಲ್ಲೂ ಸೋಜಿಗ ಉಂಟುಮಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.