ಖಾನಾಪುರ: ಇತ್ತೀಚೆಗೆ ನಿಧನ ಹೊಂದಿದ, ಬಹುಕೋಟಿ ನಕಲಿ ಛಾಪಾ ಹಗರಣದ ರೂವಾರಿ ಕರೀಂ ಲಾಲಾ ತೆಲಗಿ ಅವರ ಪತ್ನಿ ಶಾಹಿದಾ ಹಾಗೂ ಪುತ್ರಿ ಸನಾ ತಾಳಿಕೋಟಿ ಮೇಲೆ ಸಂಬಂಧಿಕರು ಹಲ್ಲೆ ನಡೆಸಿದ್ದಾಗಿ ಬುಧವಾರ ಪೊಲೀಸರಿಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.
‘ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ಕರೀಂ ಅವರ ಸೋದರ ಸಂಬಂಧಿಗಳಾದ ತಬರೇಜ, ಪರ್ವೇಜ್, ಇಸ್ತಿಯಾಕ್, ಇನಾಯತ್, ಹೀನಾ, ಸಮರೀನ್, ಅಲಮೀನ್, ಶೋಯಬ್, ಫಜಿಲನ್ ಮತ್ತು ರೇಹಾನ ಭಾನುವಾರ ಸಂಜೆ ನಮ್ಮ ಮನೆಗೆ ಬಂದು ಹಲ್ಲೆ ಮಾಡಿದ್ದಾರೆ’ ಎಂದು ಸನಾ ತಾಳಿಕೋಟಿ ಇಲ್ಲಿನ ಪೊಲೀಸರಿಗೆ ಕೊಟ್ಟಿರುವ ದೂರಿನಲ್ಲಿ ತಿಳಿಸಿದ್ದಾರೆ.
ಕರೀಂ ಲಾಲಾ ಅಂತ್ಯಕ್ರಿಯೆ ಸಂದರ್ಭದಲ್ಲಿಯೂ ಸಂಬಂಧಿಕರು ಹಾಗೂ ಶಾಹಿದಾ. ಸನಾ ಅವರ ನಡುವೆ ಗಲಾಟೆಯಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.