ADVERTISEMENT

34 ಅಧಿಕಾರಿಗಳಿಗೆ ಐಎಎಸ್‌ಗೆ ಬಡ್ತಿ

ಯುಪಿಎಸ್‌ಸಿ ಆಯ್ಕೆ ಸಮಿತಿಯಿಂದ ಪಟ್ಟಿ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 22 ಫೆಬ್ರುವರಿ 2018, 19:30 IST
Last Updated 22 ಫೆಬ್ರುವರಿ 2018, 19:30 IST

ಬೆಂಗಳೂರು: ರಾಜ್ಯದ 34 ಹಿರಿಯ ಕೆಎಎಸ್‌ ಅಧಿಕಾರಿಗಳಿಗೆ ಐಎಎಸ್‌ಗೆ ಬಡ್ತಿ ದೊರೆತಿದೆ.

ಕೇಂದ್ರ ಲೋಕಸೇವಾ ಆಯೋಗದ (ಯುಪಿಎಸ್‌ಸಿ) ಆಯ್ಕೆ ಸಮಿತಿ ಗುರುವಾರ ಬಡ್ತಿ ಪಡೆದ ಅಧಿಕಾರಿಗಳ ಪಟ್ಟಿ ಬಿಡುಗಡೆ ಮಾಡಿದೆ. ಈ ಪೈಕಿ ಒಬ್ಬರಿಗೆ (ರಾಜಮ್ಮ ಎ. ಚೌಡರೆಡ್ಡಿ) ವಿರುದ್ಧದ ಕ್ರಿಮಿನಲ್‌ ಪ್ರಕರಣ ವಿಲೇವಾರಿಗೆ ಬಾಕಿ ಇರುವುದರಿಂದ ಆಯ್ಕೆಯನ್ನು ತಾತ್ಕಾಲಿಕ ಎಂದು ಸಮಿತಿ ಪರಿಗಣಿಸಿದೆ.

ರಾಜ್ಯ ಸರ್ಕಾರ 56 ಅಧಿಕಾರಿಗಳ ಪಟ್ಟಿಯನ್ನು ಸಿದ್ದಪಡಿಸಿ  ಯುಪಿಎಸ್‌ಸಿಗೆ ಕಳುಹಿಸಿತ್ತು. 2015ರ ಆಯ್ಕೆ ಪಟ್ಟಿ ಇದಾಗಿದ್ದು, ಬಡ್ತಿ ಪಡೆದವರಿಗೆ 2012ರಿಂದ ಸೇವಾ ಹಿರಿತನ ಸಿಗಲಿದೆ ಡಾ. ಶಿವರಾಮ ಕಾರಂತ ಬಡಾವಣೆಯ ಡಿನೋಟಿಫಿಕೇಶನ್‌ ಪ್ರಕರಣಕ್ಕೆ ಸಂಬಂಧಿಸಿ ಎಸಿಬಿ ಅಧಿಕಾರಿಗಳು ವಿಚಾರಣೆ ಹೆಸರಿನಲ್ಲಿ ತೊಂದರೆ ನೀಡುತ್ತಿದ್ದಾರೆ ಎಂದು ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ದೂರಿದ್ದ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಉಪ ಕಾರ್ಯದರ್ಶಿ ಎಚ್‌. ಬಸವ ರಾಜೇಂದ್ರ, ನಗರಾಭಿವೃದ್ಧಿ ಸಚಿವ ರೋಷನ್‌ ಬೇಗ್‌ ಆಪ್ತ ಕಾರ್ಯದರ್ಶಿ ಎಚ್‌.ಎನ್‌. ಗೋಪಾಲಕೃಷ್ಣ, ಬೆಂಗಳೂರು ಅಭಿವೃದ್ಧಿ ಸಚಿವ ಕೆ.ಜೆ. ಜಾರ್ಜ್‌ ಆಪ್ತ ಕಾರ್ಯದರ್ಶಿ ಎನ್‌. ಶಿವಶಂಕರ, ಸಚಿವ ತನ್ವಿರ್‌ ಸೇಠ್ ಆಪ್ತ ಕಾರ್ಯದರ್ಶಿ ಎಂ.ಆರ್‌. ರವಿಕುಮಾರ್‌, ತೋಟಗಾರಿಕಾ ಇಲಾಖೆಯ ಆಯುಕ್ತ ವೈ.ಎಸ್‌. ಪಾಟೀಲ, ಚಾಮರಾಜನಗರ ಸಿಇಒ ಕೆ. ಹರೀಶ್‌ ಕುಮಾರ್‌ ಐಎಎಸ್‌ಗೆ ಬಡ್ತಿ ಪಡೆದ ಪ್ರಮುಖ ಅಧಿಕಾರಿಗಳು.

ADVERTISEMENT

ವಿವಿಧ ಹುದ್ದೆಗಳಲ್ಲಿರುವ ಬಿ.ಸಿ. ಸತೀಶ್‌, ಆರುಂಧತಿ ಚಂದ್ರಶೇಖರ, ಎಂ.ಆರ್‌. ರವಿ, ಪಿ.ಎನ್‌. ರವೀಂದ್ರ, ಕೆ. ಜ್ಯೋತಿ, ಸಿ.ಎಸ್‌. ಮೀನಾ ನಾಗರಾಜ, ಅಕ್ರಂ ಪಾಷಾ, ಕೆ. ಲೀಲಾವತಿ, ಪಿ. ವಸಂತಕುಮಾರ್‌, ಕರಿಗೌಡ, ಶಿವಾನಂದ ಕಾಪಸಿ, ಗಂಗೂಬಾಯಿ ರಮೇಶ್‌ ಮಾನಕರ, ಕವಿತಾ ಎಸ್‌. ಮನ್ನಿಕೇರಿ, ಆರ್‌. ಎಸ್‌. ಪೆದ್ದಪ್ಪಯ್ಯ, ಜಿ.ಸಿ. ವೃಷ
ಭೇಂದ್ರ ಮೂರ್ತಿ, ಎಂ.ಬಿ. ರಾಜೇಶ್‌ ಗೌಡ, ಮಹಾಂತೇಶ ಬೀಳಗಿ, ಕೆ.ಎಸ್‌. ರಮೇಶ್‌, ಎಸ್‌. ಹೊನ್ನಾಂಬ, ಆರ್‌. ಲತಾ, ಕೆ. ಶ್ರೀನಿವಾಸ, ಎಂ.ಎಸ್‌. ಅರ್ಚನಾ, ಕೆ.ಎ. ದಯಾನಂದ, ಜಿ. ಜಗದೀಶ್‌, ಕೆ.ಎಂ. ಜಾನಕಿ, ಸಿ. ಸತ್ಯಭಾಮ, ಕೆ.ಎಸ್‌. ಲತಾಕುಮಾರಿ ಅವರಿಗೂ ಐಎಎಸ್‌ ಬಡ್ತಿ ಲಭಿಸಿದೆ.

‘ಬಡ್ತಿ ಸಿಗಲು ವಿಳಂಬವಾಗಿದೆ. ಇದರಿಂದಾಗಿ ಒಂದಿಬ್ಬರು ಅಧಿಕಾರಿಗಳಿಗೆ ಎರಡು ವರ್ಷದ ಕರ್ತವ್ಯ ಅವಧಿ ಮಾತ್ರ ಸಿಗಲಿದೆ. ಹೀಗಾಗಿ ಕಾಲಮಿತಿಯೊಳಗೆ ಬಡ್ತಿ ನೀಡಲು ರಾಜ್ಯ ಮತ್ತು ಕೇಂದ್ರ ಕ್ರಮ ತೆಗೆದುಕೊಳ್ಳಬೇಕು’ ಎಂದು ಐಎಎಸ್‌ ಪಡೆದ ಅಧಿಕಾರಿಯೊಬ್ಬರು ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.