ADVERTISEMENT

ಬ್ರಿಟನ್‌ ವೈರಸ್‌: ಪತ್ತೆಯಾಗದ 199 ಜನರಲ್ಲಿ 80 ಮಂದಿ ವಿದೇಶಿಯರು –ಸುಧಾಕರ್‌

ಹೊಸತಾಗಿಯೂ ಯಾರಿಗೂ ಸೋಂಕು ದೃಢಪಟ್ಟಿಲ್ಲ

​ಪ್ರಜಾವಾಣಿ ವಾರ್ತೆ
Published 31 ಡಿಸೆಂಬರ್ 2020, 7:06 IST
Last Updated 31 ಡಿಸೆಂಬರ್ 2020, 7:06 IST
ಸುಧಾಕರ್‌
ಸುಧಾಕರ್‌   

ಬೆಂಗಳೂರು: ಬ್ರಿಟನ್‌ನಿಂದ ಬಂದ 199 ಜನ ಪತ್ತೆ ಆಗಿರಲಿಲ್ಲ. ಅವರಲ್ಲಿ 80 ಮಂದಿ ನಮ್ಮ ದೇಶದ ಪ್ರಜೆಗಳಲ್ಲ. ಹೀಗಾಗಿ, ಅವರ ಮಾಹಿತಿ ಇರಲಿಲ್ಲ. ನಮ್ಮವರ24 ಮಂದಿಯನ್ನ ಪತ್ತೆ ಹಚ್ಚಿದ್ದೇವೆ. ಉಳಿದವರನ್ನು ಶೀಘ್ರದಲ್ಲೆ ಪತ್ತೆ ಹಚ್ಚಲಾಗುವುದು’ ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್‌ ತಿಳಿಸಿದರು.

ಸುದ್ದಿಗಾರರ ಜೊತೆ ಗುರುವಾರ ಮಾತನಾಡಿದ ಅವರು, ‘ಬ್ರಿಟನ್‌ನಿಂದ ಬಂದ ಪ್ರಯಾಣಿಕರಲ್ಲಿ 30 ಜನರಿಗೆ ಆರ್‌ಟಿಪಿಸಿಆರ್‌ ತಪಾಸಣೆ,ಲ್ಲಿ ಪಾಸಿಟಿವ್ ಬಂದಿದೆ. ಅವರ ಸಂಬಂಧಿಕರಲ್ಲಿ ನಾಲ್ಕು ಜನರಿಗೆ ಪಾಸಿಟಿವ್‌ ಬಂದಿದೆ. ಇದರಲ್ಲಿ 7 ಮಂದಿಗೆ ಕೊರಿನಾ ರೂಪಾಂತರ ವೈರಸ್ ಪತ್ತೆಯಾಗಿದೆ. ಹೊಸತಾಗಿ ಯಾರಿಗೂ ಬಂದಿಲ್ಲ. ಈ 34 ಜನರಿಗೂ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡುತ್ತಿದ್ದೇವೆ. ಅವರ ಸಂಪರ್ಕದಲ್ಲಿದ್ದವರ ಮೇಲೆಯೂ ನಿಗಾಟ್ಟಿದ್ದೇವೆ’ ಎಂದರು.

‘ರಾತ್ರಿ ಕರ್ಪ್ಯೂ ಬಗ್ಗೆ ಗೊಂದಲ ಇಲ್ಲ. ಅಶೋಕ್ ಅವರು ರಾತ್ರಿ ಕರ್ಪ್ಯೂ ವಿಧಿಸಿದರೆ ಒಳ್ಳೆಯದು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ತಜ್ಞರ ಸಮಿತಿಯೂ ಅದನ್ನೇ ಹೇಳಿತ್ತು. ಆದರೆ, ವಿರೋಧ ಪಕ್ಷದ ಮುಖಂಡರು ವಿರೋಧ ಮಾಡಿದರು. ಸಾರ್ವಜನಿಕರಿಗೂ ತೊಂದರೆ ಆಗಬಾರದು ಎಂಬ ಕಾರಣಕ್ಕೆ ಮುಖ್ಯಮಂತ್ರಿ ರದ್ದುಪಡಿಸಿದ ತೀರ್ಮಾನ ತೆಗೆದುಕೊಂಡರು’ ಎಂದರು.

ADVERTISEMENT

‘ರೂಪಾಂತರ ವೈರಸ್ ಕಂಡುಬಂದ ಅಪಾರ್ಟ್ ಮೆಂಟ್ ಸೀಲ್ ಡೌನ್ ಮಾಡುತ್ತೇವೆ. ಯಾಕೆಂದರೆ ಈ ವೈರಸ್‌ ವೇಗವಾಗಿ ಹರಡುತ್ತದೆ. ಹೀಗಾಗಿ ಕಟ್ಟುನಿಟ್ಟಿನ ಕವ್ರಮ ತೆಗೆದುಕೊಳ್ಳುತ್ತೇವೆ’ ಎಂದರು.

‘ಹೊಸ ವರ್ಷದ ಆಚರಣೆಗೆ ಯುವಕರು, ಯುವತಿಯರು ತಯಾರಾಗಿದ್ದಾರೆ. ಆದರೆ, ಈಗ ಸಂಭ್ರಮಪಡುವ ಸಂದರ್ಭ ಇಲ್ಲ. ಈ ಬಾರಿ ಹೊಸ ವರ್ಷ ಆಚರಣೆ ಬಹಿಷ್ಕರಿಸಿ ಅಥವಾ ಸರಳವಾಗಿ ತಮ್ಮ ಮನೆಯಲ್ಲೆ ಆಚರಿಸಿ, ಹೆಚ್ಚು ಜನ ಸೇರಬೇಡಿ. ಕೊರೊನಾ ಕಡಿಮೆಯಾಗಿದೆ ಎಂದು ಈಗಾಗಲೇ ಕೆಲವರು ತಿಳಿದಿದ್ದಾರೆ. ಆದರೆ, ಆ ನಿರ್ಲಕ್ಷ್ಯ ಬೇಡ. ಲಸಿಕೆ ಬರುವವರೆಗೂ ಮುಂಜಾಗ್ರತೆ ವಹಿಸಿ’ ಎಂದು ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.