ADVERTISEMENT

ರಾಜ್ಯದಲ್ಲಿ ಮದ್ಯ ಮಾರಾಟ ಶೇ 9ರಷ್ಟು ಹೆಚ್ಚಳ

​ಪ್ರಜಾವಾಣಿ ವಾರ್ತೆ
Published 3 ಆಗಸ್ಟ್ 2021, 2:59 IST
Last Updated 3 ಆಗಸ್ಟ್ 2021, 2:59 IST

ಬೆಂಗಳೂರು: ಜುಲೈ ತಿಂಗಳಲ್ಲಿ ರಾಜ್ಯದಲ್ಲಿ 53.41 ಲಕ್ಷ ಪೆಟ್ಟಿಗೆಗಳಷ್ಟು ದೇಶೀಯವಾಗಿ ತಯಾರಾದ ಮದ್ಯ (ಐಎಂಎಲ್‌) ಮಾರಾಟವಾಗಿದೆ. ಜೂನ್‌ಗೆ ಹೋಲಿಸಿದರೆ ಮದ್ಯ ಮಾರಾಟದಲ್ಲಿ ಶೇಕಡ 9.16ರಷ್ಟು ಹೆಚ್ಚಳವಾಗಿದೆ.

ಏಪ್ರಿಲ್‌ನಲ್ಲಿ 55.99 ಲಕ್ಷ ಪೆಟ್ಟಿಗೆಯಷ್ಟು ಐಎಂಎಲ್‌ ಮಾರಾಟವಾಗಿತ್ತು. ಮೇ ತಿಂಗಳಿನಲ್ಲಿ ಮಾರಾಟ ಕುಸಿದಿತ್ತು. ಆಗ 43.67 ಲಕ್ಷ ಪೆಟ್ಟಿಗೆಯಷ್ಟೇ ಮಾರಾಟವಾಗಿತ್ತು. ಜೂನ್‌ನಲ್ಲಿ 54.53 ಲಕ್ಷ ಪೆಟ್ಟಿಗೆಗಳಷ್ಟು ಐಎಂಎಲ್‌ ಬಿಕರಿಯಾಗಿತ್ತು.

ಮೇ ತಿಂಗಳಲ್ಲಿ ಶೇ 1.78, ಜೂನ್‌ನಲ್ಲಿ ಶೇ 3.14ರಷ್ಟು ಕುಸಿದಿತ್ತು. ಜುಲೈನಲ್ಲಿ ಶೇ 9.16ರಷ್ಟು ಏರಿಕೆಯಾಗಿದೆ ಎಂದು ಅಬಕಾರಿ ಇಲಾಖೆಯ ಅಂಕಿಅಂಶಗಳಲ್ಲಿದೆ.

ADVERTISEMENT

2020–21ನೇ ಆರ್ಥಿಕ ವರ್ಷದ ಮೊದಲ ನಾಲ್ಕು ತಿಂಗಳಲ್ಲಿ 1.49 ಕೋಟಿ ಪೆಟ್ಟಿಗೆಯಷ್ಟು ಮಾರಾಟವಾಗಿದ್ದರೆ, 2021–22ರ ಮೊದಲ ನಾಲ್ಕು ತಿಂಗಳಲ್ಲಿ 2.07 ಕೋಟಿ ಪೆಟ್ಟಿಗೆಗಳಷ್ಟು ಮದ್ಯ ಮಾರಾಟವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.