ADVERTISEMENT

ಸಚಿವರ ಗೈರು; ವಿಧಾನ ಪರಿಷತ್‌ ಕಲಾಪ ಮುಂದೂಡಿಕೆ

​ಪ್ರಜಾವಾಣಿ ವಾರ್ತೆ
Published 19 ಜುಲೈ 2023, 22:30 IST
Last Updated 19 ಜುಲೈ 2023, 22:30 IST
ವಿಧಾನ ಪರಿಷತ್‌ ಕಲಾಪ
ವಿಧಾನ ಪರಿಷತ್‌ ಕಲಾಪ   

ಬೆಂಗಳೂರು: ‘ಕನಿಷ್ಠ ಮೂವರು ಸಚಿವರು ಇಲ್ಲದೆ ಕಲಾಪ ನಡೆಸಲು ಆಗದು’ ಎಂಬ ಬಿಜೆಪಿಯ ಕೋಟ ಶ್ರೀನಿವಾಸ ಪೂಜಾರಿ ಮಾತಿಗೆ ವಿರೋಧ ಪಕ್ಷದ ಇತರೆ ಸದಸ್ಯರೂ ಧ್ವನಿಗೂಡಿಸಿದ್ದರಿಂದ ಮಧ್ಯಾಹ್ನದ ನಂತರ ಆರಂಭವಾದ ವಿಧಾನ ಪರಿಷತ್‌ ಕಲಾಪಗಳನ್ನು ಸಭಾಪತಿ ಬಸವರಾಜ ಹೊರಟ್ಟಿ ಐದು ನಿಮಿಷ ಮುಂದೂಡಿದರು.

ಕಾಂಗ್ರೆಸ್‌ ವಿರೋಧ ಪಕ್ಷದ ಸ್ಥಾನದಲ್ಲಿದ್ದಾಗ ಇದೇ ವಿಷಯಕ್ಕೆ ಹಲವು ಬಾರಿ ಕಲಾಪಕ್ಕೆ ಅಡ್ಡಿಪಡಿಸಿದ್ದಾರೆ. ಈಗ ಅವರದೇ ಸರ್ಕಾರವಿದೆ. ನಿಯಮ ಪಾಲಿಸಬೇಕಲ್ಲವೇ ಎಂದು ಬಿಜೆಪಿ ಸದಸ್ಯರು ಪ್ರಶ್ನಿಸಿದರು.

ಕಲಾಪ ಮತ್ತೆ ಆರಂಭವಾದಾಗ ಸಚಿವರಾದ ರಾಮಲಿಂಗಾರೆಡ್ಡಿ, ಮಂಕಾಳ ವೈದ್ಯ, ರಹೀಂ ಖಾನ್, ವೆಂಕಟೇಶ್‌, ಸಂತೋಷ್‌ ಲಾಡ್‌, ಆರ್.ಬಿ. ತಿಮ್ಮಾಪುರ, ಶರಣಪ್ರಕಾಶ ಪಾಟೀಲ, ಎಂ.ಸಿ.ಸುಧಾಕರ್ ಹಾಜರಾದರು.

ADVERTISEMENT

‘ಸದನದ ಸದಸ್ಯರೇ ಹೆಚ್ಚಿನ ಸಂಖ್ಯೆಯಲ್ಲಿ ಗೈರು ಹಾಜರಾಗುತ್ತೀರಿ. ಅಧಿಕ ಸಮಯ ಸದನಲ್ಲಿ ಕಳೆಯಬೇಕು. ಮೊಬೈಲ್‌ಗಳನ್ನು ಸದನದ ಒಳಗೆ ಬಳಸಬೇಡಿ. ಚರ್ಚೆಯಲ್ಲಿ ಮುಕ್ತವಾಗಿ ಭಾಗವಹಿಸಿ’ ಎಂದು ಸಭಾಪತಿ ಎಲ್ಲರಿಗೂ ಕಿವಿಮಾತು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.