ADVERTISEMENT

‘ರಾಜಕೀಯ ಲಾಭಕ್ಕೆ ಆರೋಪ’

​ಪ್ರಜಾವಾಣಿ ವಾರ್ತೆ
Published 31 ಅಕ್ಟೋಬರ್ 2020, 18:28 IST
Last Updated 31 ಅಕ್ಟೋಬರ್ 2020, 18:28 IST

ಬೆಂಗಳೂರು: ‘ವಿದೇಶಿ ಹಾಗೂ ಆಂತರಿಕ ಗೂಢಚರ್ಯೆ ಬಲಪಡಿಸಲು ಬೇಕಾದ ಕ್ರಮಗಳ ಬಗ್ಗೆ ಎಲ್ಲ ಪಕ್ಷಗಳ ಅಭಿಪ್ರಾಯ ಪಡೆದು ಹಿರಿಯಣ್ಣನ ಪಾತ್ರ ವಹಿಸಬೇಕಿದ್ದ ಕೇಂದ್ರ ಸರ್ಕಾರ ಮತ್ತು ಬಿಜೆಪಿ ನಾಯಕರು, ರಾಜಕೀಯ ಲಾಭಕ್ಕಾಗಿ ಆರೋಪ ಗಳನ್ನು ಮಾಡುವುದರಲ್ಲಿ ಯಾವುದೇ ಅರ್ಥವಿಲ್ಲ’ ಎಂದು ಮಾಜಿ ಸಂಸದ ಕಾಂಗ್ರೆಸ್‌ನ ಆರ್. ಧ್ರುವನಾರಾಯಣ ಹೇಳಿದ್ದಾರೆ.

‘ಕೇಂದ್ರ ಸಚಿವ ಪ್ರಲ್ಹಾದ ಜೋಶಿ ವಾಸ್ತವಗಳನ್ನು ಮರೆಮಾಚಿ ಹೇಳಿಕೆ ನೀಡುತ್ತಿದ್ದಾರೆ. ಪುಲ್ವಾಮಾ ದಾಳಿ ಪಾಕಿಸ್ತಾನದ ಭಯೋತ್ಪಾದಕ ಚಟುವಟಿಕೆಯ ಭಾಗ. ಅದನ್ನು ನಿಯಂತ್ರಿಸದೇ ಇದ್ದುದರಿಂದ ನಮ್ಮ ಸೈನಿಕರ ಜೀವಹಾನಿ ಸಂಭವಿಸಿದೆ. ಇದು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ವೈಫಲ್ಯ. ಈ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಲಿ’ ಎಂದು ಹೇಳಿದ್ದಾರೆ.

‘ಭಾರತದ ವಿರುದ್ದ ಸಮರ ಸಾರಿರುವ ಪಾಕಿಸ್ತಾನದ ಪ್ರಧಾನಿ ಮನೆಯಲ್ಲಿ ಭೋಜನ ಸವಿಯಲು ಈಗಿನ ಪ್ರಧಾನಿ ಹೋಗಿದ್ದರು. ಹೀಗಾಗಿ, ಯಾರು ಯಾರನ್ನು ಮೂರ್ಖರನ್ನಾಗಿ ಮಾಡಲಾಗುತ್ತಿದೆ ಎನ್ನುವುದನ್ನು ಬಿಜೆಪಿ ನಾಯಕರೇ ಹೇಳಬೇಕು’ ಎಂದಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.