ADVERTISEMENT

ಖರೀದಿಗೆ ಮುಗಿಬಿದ್ದ ಜನ

​ಪ್ರಜಾವಾಣಿ ವಾರ್ತೆ
Published 21 ಡಿಸೆಂಬರ್ 2019, 19:56 IST
Last Updated 21 ಡಿಸೆಂಬರ್ 2019, 19:56 IST

ಮಂಗಳೂರು: ನಗರದಲ್ಲಿ ಶನಿವಾರ ಮಧ್ನಾಹ್ನದ ಬಳಿಕ ಕರ್ಪ್ಯೂ ಸಡಿಲಿಕೆಯ ಬಳಿಕ ಜನಜೀವನ ಸ್ವಲ್ಪಮಟ್ಟಿಗೆ ಸಹಜ ಸ್ಥಿತಿಗೆ ಮರಳುವಂತಾಯಿತು. ಶನಿವಾರ ಮಧಾಹ್ನ3 ರಿಂದ ಸಂಜೆ 6 ಗಂಟೆ
ಯವರೆಗೆ ಕರ್ಪ್ಯೂ ಸಡಿಲಿಕೆ ಮಾಡಿದ್ದರಿಂದ ತರಕಾರಿ, ಹಾಲು, ದಿನಸಿ ಅಂಗಡಿಗಳು ತೆರೆದಿದ್ದವು. ಜನರು ಅಗತ್ಯ ವಸ್ತುಗಳಿಗಾಗಿ ಅಂಗಡಿಗಳಿಗೆ ಮುಗಿಬಿದ್ದು ಖರೀದಿಸುವ ದೃಶ್ಯ ಸಾಮಾನ್ಯವಾಗಿತ್ತು.

ಬೆಳಿಗ್ಗೆ ನಗರದ ಕಾವೂರು, ಬಂಟ್ಸ್‌ ಹಾಸ್ಟೆಲ್‌, ಲೇಡಿಹಿಲ್‌ ವೃತ್ತಗಳಲ್ಲಿ ಗುಂಪಾಗಿ ಸಂಚರಿಸುತ್ತಿದ್ದ ಜನರನ್ನು ಪೊಲೀಸರು ಲಘು ಲಾಠಿ ಪ್ರಹಾರ ಮಾಡಿ, ಚದುರಿಸಿದರು. ಬೆಳಿಗ್ಗೆ 6 ರಿಂದ 8 ಗಂಟೆಯವರೆಗೆ ಕರ್ಫ್ಯೂ ಸಡಿಲಿಕೆ ಮಾಡಲಾಗಿತ್ತು. ಆದರೆ, ಅದರ ಮಾಹಿತಿ ಇಲ್ಲದೇ, ಜನರು ಪರದಾಡಿದರು. 8 ಗಂಟೆಯಾಗುತ್ತಲೇ, ಪೊಲೀಸರು ಅಂಗಡಿಗಳನ್ನು ಬಂದ್‌ ಮಾಡಿಸಿದರು.

ನಿಧಾನವಾಗಿ ವ್ಯಾಪಾರ, ವಹಿವಾಟು ಸಹಜ ಸ್ಥಿತಿಗೆ ಮರಳುತ್ತಿದ್ದು, ಶನಿವಾರ ಮಧ್ಯಾಹ್ನ ಹಲವಾರು ವಾಹನಗಳು ರಸ್ತೆಗೆ ಇಳಿದಿದ್ದವು. ಮತ್ತೆ ಸಂಜೆ ಆರು ಗಂಟೆಯ ನಂತರ ರಸ್ತೆಗಳು ಬಿಕೋ ಎನ್ನುತ್ತಿದ್ದವು. ನಗರದಲ್ಲಿ ಶನಿವಾರವೂ ಬಿಗಿ ಬಂದೋಬಸ್ತ್ ಮುಂದುವರಿದಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.