ADVERTISEMENT

ಮಂಗಳೂರು– ಏರ್‌ಇಂಡಿಯಾ ಸಿಬ್ಬಂದಿ ದುರ್ವರ್ತನೆ: ಪ್ರಯಾಣಿಕ ಆಕ್ಷೇಪ

​ಪ್ರಜಾವಾಣಿ ವಾರ್ತೆ
Published 2 ಜುಲೈ 2022, 19:13 IST
Last Updated 2 ಜುಲೈ 2022, 19:13 IST
   

ಮಂಗಳೂರು: ಕುವೈಟ್‌ ವಿಮಾನಿಲ್ದಾಣವೊಂದರಲ್ಲಿ ಏರ್‌ಇಂಡಿಯಾ ಕೌಂಟರ್‌ನ ವ್ಯವಸ್ಥಾಪಕ ಉದ್ಧಟತನದ ವರ್ತನೆ ತೋರಿರುವುದಾಗಿ ಕುವೈತ್‌ನ ಅನಿವಾಸಿ ಭಾರತೀಯರಾಗಿರುವ ಎಂಜಿನಿಯರ್‌ ಮಂಜೇಶ್ವರದ ಮೋಹನ್‌ದಾಸ್ ಕಾಮತ್ ಅವರು ಟ್ವೀಟ್ ಮಾಡಿದ್ದಾರೆ.

ಕಾಮತ್ ಅವರ ಟ್ವೀಟ್‌ಗೆ ಪ್ರತಿಕ್ರಿಯಿಸಿರುವ ಏರ್ ಇಂಡಿಯಾ ಸಂಸ್ಥೆಯು ಘಟನೆಗೆ ಕ್ಷಮೆ ಯಾಚಿಸಿದೆ. ‘ಪ್ರಕರಣದ ತನಿಖೆ ನಡೆಸಲು ಸಂಬಂಧಪಟ್ಟ ವಿಭಾಗಕ್ಕೆ ದೂರನ್ನು ಕಳುಹಿಸಲಾಗಿದೆ’ ಎಂದು ಮಾಹಿತಿ ನೀಡಿದೆ.

ಮೋಹನ್‌ದಾಸ್ ಅವರ ಕುಟುಂಬ ಸದಸ್ಯರು ಶುಕ್ರವಾರ ಬೆಳಗ್ಗೆ 10.50 ಕ್ಕೆ ಮಂಗಳೂರಿಗೆ ತೆರಳುವ ಏರ್‌ಇಂಡಿಯಾ ವಿಮಾನದಲ್ಲಿ ಪ್ರಯಾಣಿಸಬೇಕಿತ್ತು. ಪ್ರಯಾಣದ ದಿನ ಸರದಿಯಲ್ಲಿ ನಿಂತು ತಪಾಸಣೆಗೆ ಒಳಗಾಗುವುದನ್ನು ತಪ್ಪಿಸಲು ಕಾಮತ್ ಅವರ ಕುಟುಂಬದ ಸದಸ್ಯರು ಪ್ರಯಾಣದ 24 ಗಂಟೆ ಮುಂಚಿತವಾಗಿಯೇ ವೆಬ್ ಚೆಕ್ಕಿಂಗ್ ಪೂರ್ಣಗೊಳಿಸಿದ್ದರು.

ADVERTISEMENT

‘ವೆಬ್ ಚೆಕ್ಕಿಂಗ್ ಪೂರ್ಣಗೊಳಿಸಿದ ಪ್ರಯಾಣಿಕರು ಪ್ರಯಾಣದ ಒಂದೂವರೆ ಗಂಟೆ ಮೊದಲು ವಿಮಾನ ನಿಲ್ದಾಣಕ್ಕೆ ಆಗಮಿಸಿ ತಮ್ಮ ಲಗೇಜ್‌ಗಳನ್ನು ನಿದಿಪಡಿಸಿದ ಸ್ಥಳದಲ್ಲಿ ತಲುಪಿಸಿ ಬೋರ್ಡಿಂಗ್ ಪಾಸ್ ತೋರಿಸಿದರೆ ಸಾಕು. ಅವರು ತಪಾಸಣಾ ಪ್ರಕ್ರಿಯೆ ಪೂರ್ಣಗೊಳಿಸದ ಪ್ರಯಾಣಿಕರ ಜೊತೆ ಸರದಿನಲ್ಲಿ ನಿಲ್ಲುವ ಅಗತ್ಯವಿಲ್ಲ. ವೆಬ್‌ಚೆಕ್ಕಿಂಗ್ ಮಾಡಿಸಿಕೊಂಡಿದ್ದರೂ ನಮ್ಮ ಕುಟುಂಬವನ್ನು ತಪಾಸಣೆ ಸಲುವಾಗಿ ಇತರ ಪ್ರಯಾಣಿಕರ ಜೊತೆಯಲ್ಲೇ ಸರದಿಯಲ್ಲಿ ನಿಲ್ಲಿಸಲಾಯಿತು. ಇದನ್ನು ಪ್ರಶ್ನಿಸಿದಾಗ ಈ ಬಗ್ಗೆ ಏರ್‌ಇಂಡಿಯಾ ಕೌಂಟರ್‌ನ ವ್ಯವಸ್ಥಾಪಕರು ಉದ್ಧಟತನದಿಂದದ ಉತ್ತರಿಸಿದರು’ ಎಂದು ಮೋಹನ್‌ದಾಸ್ ಕಾಮತ್ ಟ್ವೀಟ್ ಮಾಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.