ADVERTISEMENT

ಕುಲಪತಿಗಳ ವಿಶೇಷ ಭತ್ಯೆ ಪರಿಷ್ಕರಣೆ

​ಪ್ರಜಾವಾಣಿ ವಾರ್ತೆ
Published 24 ಮಾರ್ಚ್ 2019, 20:35 IST
Last Updated 24 ಮಾರ್ಚ್ 2019, 20:35 IST
   

ಬೆಂಗಳೂರು: ಏಳನೇ ವೇತನ ಆಯೋಗದ ಶಿಫಾರಸ್ಸಿನಂತೆ ಕೇಂದ್ರಿಯ ವಿಶ್ವವಿದ್ಯಾಲಯ, ಕೇಂದ್ರದ ಧನ ಸಹಯೋಗದಲ್ಲಿ ನಡೆಯುತ್ತಿರುವ ಡೀಮ್ಡ್‌ ವಿಶ್ವವಿದ್ಯಾಲಯಗಳ ಕುಲಪತಿಗಳು, ಪದವಿ ಮತ್ತು ಸ್ನಾತಕೋತ್ತರ ಕಾಲೇಜುಗಳ ಪ್ರಾಂಶುಪಾಲರ ವಿಶೇಷ ಭತ್ಯೆಯನ್ನು ಪರಿಷ್ಕರಿಸಲಾಗಿದೆ.

ಉಪನ್ಯಾಸಕರು, ರಿಜಿಸ್ಟ್ರಾರ್‌ಗಳು, ಹಣಕಾಸು ಅಧಿಕಾರಿಗಳು, ಪರೀಕ್ಷಾ ನಿಯಂತ್ರಕರು ಮತ್ತು ಸಹಾಯಕ ಪರೀಕ್ಷಾ ನಿಯಂತ್ರಕರ ವಿಶೇಷ ಭತ್ಯೆ ಪರಿಷ್ಕರಿಸಲಾಗಿದೆ. ಡೆಪ್ಯೂಟಿ ರಿಜಿಸ್ಟ್ರಾರ್‌, ಸಹಾಯಕ ರಿಜಿಸ್ಟ್ರಾರ್‌, ಉಪ ಪರೀಕ್ಷಾ ನಿಯಂತ್ರಕರು, ಉಪ ಹಣಕಾಸು ಅಧಿಕಾರಿ ಮತ್ತು ಸಹಾಯಕ ಹಣಕಾಸು ಅಧಿಕಾರಿಗಳಿಗೂವಿಶೇಷ ಭತ್ಯೆ ಪರಿಷ್ಕರಣೆ ಅನ್ವಯವಾಗಲಿದೆ.

ಉಪಕುಲಪತಿಗಳಿಗೆ ತಿಂಗಳಿಗೆ ₹11,250, ಪ್ರೊ ವೈಸ್‌ ಚಾನ್ಸಲರ್‌ಗಳಿಗೆ ₹9,000, ಪಿಜಿ ಕಾಲೇಜುಗಳ ಪ್ರಾಂಶುಪಾಲರಿಗೆ ₹6,750 ಮತ್ತು ಪದವಿ ಕಾಲೇಜುಗಳ ಪ್ರಾಂಶುಪಾಲರಿಗೆ ವಿಶೇಷ ಭತ್ಯೆಯನ್ನು ₹4,500 ನಿಗದಿ ಮಾಡಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.