ADVERTISEMENT

ವಿದ್ಯುತ್‌ ಕಾಯ್ದೆಗೆ ತಿದ್ದುಪಡಿ: ಸುಧಾರಣೆ ನಿಟ್ಟಿನಲ್ಲಿನ ಉತ್ತಮ ಹೆಜ್ಜೆ

​ಪ್ರಜಾವಾಣಿ ವಾರ್ತೆ
Published 3 ಜೂನ್ 2020, 3:12 IST
Last Updated 3 ಜೂನ್ 2020, 3:12 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬಹಳ ವರ್ಷಗಳ ನಂತರ ಬದಲಾವಣೆಗೆ ಮುಂದಾಗಿರುವುದು ವಿದ್ಯುತ್‌ ಕ್ಷೇತ್ರದ ಸುಧಾರಣೆ ನಿಟ್ಟಿನಲ್ಲಿನ ಉತ್ತಮ ಹೆಜ್ಜೆಯಾಗಿದೆ. ಕರಡು ಪ್ರಸ್ತಾವವು ಒಳ್ಳೆಯ ಉದ್ದೇಶಗಳನ್ನೇ ಹೊಂದಿದೆ. ಯಾವುದೇ ಸುಧಾರಣಾ ಕ್ರಮವನ್ನು ಜಾರಿಗೆ ತರಲು ಹೊರಟಾಗ ಆರಂಭದಲ್ಲಿ ಅಸ್ಪಷ್ಟತೆ ಮತ್ತು ಗೊಂದಲ ಕಂಡು ಬರುವುದು ಸಹಜ. ದೂರಸಂಪರ್ಕ ಕ್ಷೇತ್ರದಲ್ಲಿ ಖಾಸಗಿ ಕಂಪನಿಗಳಿಗೆ ಅವಕಾಶ ಮಾಡಿಕೊಟ್ಟ ನಂತರ ಸೇವಾ ದಕ್ಷತೆ, ಸ್ಪರ್ಧಾತ್ಮಕ ದರ ಮತ್ತಿತರ ಸೌಲಭ್ಯಗಳಲ್ಲಿ ಗಮನಾರ್ಹ ಬದಲಾವಣೆಗಳಾಗಿವೆ. ಅದೇ ಬಗೆಯ ಗುಣಾತ್ಮಕ ಬದಲಾವಣೆಗಳು ವಿದ್ಯುತ್‌ ವಲಯದಲ್ಲಿಯೂ ಕಂಡು ಬರಲಿವೆ. ಬೆಲೆ ಹೆಚ್ಚಿದರೂ ವಿದ್ಯುತ್‌ ಪೂರೈಕೆ ಸುಧಾರಿಸಲಿದೆ. ಸಬ್ಸಿಡಿ ಗೊಂದಲಗಳೆಲ್ಲ ದೂರವಾಗಲಿವೆ.

ನಮ್ಮಲ್ಲಿ ವಿದ್ಯುತ್‌ ಉತ್ಪಾದನೆಯ ಗುಣಮಟ್ಟವೇ (power frequency) 49 ಹರ್ಟ್ಸ್‌ ಇದೆ. ಹೀಗಾಗಿ ವಿತರಣೆ ಹಂತದಲ್ಲಿಯೂ ವಿದ್ಯುತ್‌ ಗುಣಮಟ್ಟ ಕಡಿಮೆ ಇರಲಿದೆ. ಸುಧಾರಣಾ ಕ್ರಮಗಳಿಂದ ವೋಲ್ಟೇಜ್‌ ಪರಿಸ್ಥಿತಿ ಸುಧಾರಿಸಬಹುದು. ಕೈಗಾರಿಕಾ ಘಟಕಗಳು ಮುಕ್ತ ಮಾರುಕಟ್ಟೆಯಲ್ಲಿ ವಿದ್ಯುತ್‌ ಖರೀದಿಸುವುದು ಸುಲಭಗೊಳ್ಳಲಿದೆ.

-ಡಿ. ಮುರಳೀಧರ್‌, ಕೈಗಾರಿಕೋದ್ಯಮಿ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.