ADVERTISEMENT

ನಮ್ಮ ಮನೆಗೆ ನೀನು ಕಳಂಕವೆಂದು ಹೇಳಿದ್ರು ನನ್ನ ಅಪ್ಪ: ಸಚಿವ ಹೆಗಡೆ

​ಪ್ರಜಾವಾಣಿ ವಾರ್ತೆ
Published 16 ಮಾರ್ಚ್ 2019, 12:43 IST
Last Updated 16 ಮಾರ್ಚ್ 2019, 12:43 IST
   

ಕಾರವಾರ:ಕೇಂದ್ರ ಸಚಿವ ಅನಂತಕುಮಾರ ಹೆಗಡೆ, ‘ನನಗೆ ನಮ್ಮಪ್ಪ,ನೀನು ಕಾಂಗ್ರೆಸ್ ಬಿಟ್ಟುಹೋಗಿದ್ದೀಯ.. ನಮ್ಮ ಮನೆಗೆ ನೀನು ಕಳಂಕವೆಂದು ಹೇಳಿದ್ರು’ ಎಂದು ಹೇಳಿದ್ದ ಭಾಷಣದ ವಿಡಿಯೊ ಈಗ ಮೊಬೈಲ್‌ಗಳಲ್ಲಿ ಹರಿದಾಡುತ್ತಿದೆ.

ಅವರು ತಾಲ್ಲೂಕಿನ ದೇವಳಮಕ್ಕಿಯಲ್ಲಿಕೆಲವು ದಿನಗಳ ಮೊದಲುಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ್ದರು. ಮೊದಲ ಬಾರಿಗೆ ತಮಗೆ ಬಿಜೆಪಿಯಿಂದ ಟಿಕೆಟ್ ಸಿಕ್ಕಾಗ ತಮ್ಮ ತಂದೆಯವರ ಪ್ರತಿಕ್ರಿಯೆಗಳ ಬಗ್ಗೆ ಅವರು ವಿವರಿಸಿದ್ದರು.

‘ನಮ್ಮ ಮನೆಯಲ್ಲಿ ಬಿಜೆಪಿಗೆ ವೋಟ್ ಹಾಕಿ ಗೊತ್ತಿರಲಿಲ್ಲ. ಫಸ್ಟ್ ಬಿಜೆಪಿ ಎಂ.ಪಿ ಟಿಕೆಟ್ ಸಿಕ್ಕಿದಾಗ ನನಗೆ ಬೈದಿದ್ರು. ಸ್ವಾತಂತ್ರ್ಯ ಹೋರಾಟಗಾರರ ಇದ್ರಿಂದ ಬಂದವರು. ಅದಕ್ಕೋಸ್ಕರ, ನೀನು ಕಾಂಗ್ರೆಸ್ ಬಿಟ್ಟುಹೋಗಿದ್ದೀಯ... ನಮ್ಮ ಮನೆಗೆ ನೀನು ಕಳಂಕ ಎಂದು ಹೇಳಿದ್ರು. ಅವರಿಗೆ ಕಾಂಗ್ರೆಸ್ ಬಿಟ್ಟು ವೋಟ್ ಹಾಕಿ ಗೊತ್ತಿರಲಿಲ್ಲ..’

ADVERTISEMENT

‘ಕಳೆದ ಐದು ಬಾರಿ ಚುನಾವಣೆಗೆ ನಿಂತಿದ್ದರೂ ಸಹ ನನ್ನಪ್ಪ ನನಗೆ ವೋಟ್ ಹಾಕಿದಾರೆ ಅಂತ ನನಗೇನೂ ಧೈರ್ಯವಿಲ್ಲ. ನೀವೆಲ್ಲ ವೋಟ್ ಹಾಕಿರಬಹುದು, ಆದರೆ ನನ್ನಪ್ಪ ಹಾಕಿದಾರ ಅಂತ ಗೊತ್ತಿಲ್ಲ. ಆದರೆ, ಈ ಬಾರಿ ನಮ್ಮಪ್ಪ ಬಂದು ‘ಈ ಬಾರಿ ಬಿಜೆಪಿಗೆ ಕೊಡುವಾಂತ ಮಾಡಿದೇನೆ... ನಿನ್ನನ್ನು ನೋಡಿ ಅಲ್ಲ, ಮೋದಿ ನೋಡಿ..’ ಎಂದರು.

ಈ ವಾತಾವರಣ ಇವತ್ತು ಬೆಳೆದಿದೆ. ಯಾರೂ ಹೇಳಬೇಕೂಂತ ಇಲ್ಲ. ಕಾಂಗ್ರೆಸ್‌ನವರು ಕ್ಯಾಂಡಿಡೇಟ್ ಹಾಕೋದಕ್ಕೆ ರೆಡಿಯಿಲ್ಲ. ಜನತಾದಳಕ್ಕೆ ಕೊಡೋಣಾಂತ ನೋಡ್ತಿದಾರೆ’ ಎಂದು ಹೇಳುತ್ತ ಭಾಷಣ ಮುಂದುವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.